Pro Kabaddi League: ನಾಳೆಯಿಂದ ಆರಂಭವಾಗಲಿದೆ ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌..! ಈ ಚಾನೆಲ್‌ನಲ್ಲಿ ಪ್ರಸಾರವಾಗುತ್ತೆ ಲೈವ್ ಮ್ಯಾಚ್

Share the Article

Pro Kabaddi League: ದೇಶದಲ್ಲಿ ಬಹುನಿರೀಕ್ಷಿತ ವಿವೋ ಪ್ರೊ ಕಬಡ್ಡಿ ಲೀಗ್‌ (Pro Kabaddi League) ಸೀಸನ್‌ 10ರ ಹವಾ ಶುರುವಾಗಲಿದೆ. ನಾಳೆ ಪ್ರೊ ಕಬ್ಬಡ್ಡಿ ಪಂದ್ಯಾವಳಿಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ. ಈ ರೋಚಕ ಪಂದ್ಯಾವಳಿಯ ಆರಂಭದಲ್ಲೇ ಸ್ಟಾರ್ ಆಟಗಾರರಾದ ಫಾಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು, ಕುತೂಹಲ ಕೆರಳಿಸಿದೆ.

ಸದ್ಯ 4 ವರ್ಷಗಳ ನಂತರ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್‌ನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ತಮ್ಮ ತವರಿನ ಅಂಗಳದಲ್ಲಿ ಆಡಲು ಸಿದ್ಧವಾಗಿವೆ. ಮುಖ್ಯವಾಗಿ ಡಿಸೆಂಬರ್ 2ರಂದು ಪ್ರಾರಂಭವಾಗಲಿರುವ ಪಂದ್ಯಾವಳಿಗಳು 2024ರ ಫೆಬ್ರವರಿ 21ರವರೆಗೆ ನಡೆಯಲಿವೆ.

ಇನ್ನು ಪ್ರೊ ಕಬಡ್ಡಿ ಲೀಗ್‌ ಸೀಸನ್‌ 10 ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು ಅಲ್ಲದೆ, ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಸಹ ಆಗಲಿದ್ದು, ಇಷ್ಟ ಬಂದ ಸ್ಥಳದಲ್ಲಿ ಕುಳಿತು ನಿಮ್ಮ ನೆಚ್ಚಿನ ತಂಡದ ಆಟದ ಮಜಾ ಆನಂದಿಸಬಹದು.

ಇದನ್ನು ಓದಿ: B S Yadiyurappa: ವಿಜಯೇಂದ್ರಗೆ ದಯವಿಟ್ಟು ಇನ್ನು ಮನೆಗೆ ಬರಬೇಡ ಎಂದು ತಾಕೀತು ಮಾಡಿದ ಯಡಿಯೂರಪ್ಪ !!

Leave A Reply