Life Partner post: ಹುಡುಗರೇ….ನಿಮಗೇನಾದ್ರೂ ರೀಲ್ಸ್ ಮಾಡೋ ಹುಚ್ಚುಂಟಾ ? ಹಾಗಿದ್ರೆ ಮದ್ವೆಯಾಗಲು ಸೂಪರ್ ಫಿಗರಿನಿಂದ ಬಂಪರ್ ಆಫರ್ ಉಂಟು ಗೊತ್ತುಂಟಾ ?!!
Viral news woman's matrimonial ad for a suitable groom has gone viral

Life Partner Post: ದಿನಂಪ್ರತಿ ಅದೆಷ್ಟೋ ವೀಡಿಯೋ(Video)ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media)ಹರಿದಾಡಿ ಸಂಚಲನ ಮೂಡಿಸುತ್ತವೆ. ಇದೀಗ, ವೈರಲ್ ಆಗಿರುವ ಸುದ್ದಿಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿಗೆ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿ ಕೂಡ ರೀಲ್ಸ್ ಮಾಡುವ ಹುಡುಗರು – ಹುಡುಗಿಯರು ತಮ್ಮ ಹಾಗೇ ರೀಲ್ಸ್ ಮಾಡೋ ಲೈಫ್ ಪಾರ್ಟ್ನರ್( Life Partner)ಸಿಗಬೇಕೆಂದು ಸಹಜವಾಗಿ ಇಚ್ಛಿಸುತ್ತಾರೆ.ಆದರೆ, ಇಲ್ಲೊಬ್ಬಳು ರೀಲ್ಸ್ ಮಾಡುವ ಯುವತಿ ತನ್ನ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದು, ಆಕೆಯ ಕಂಡೀಷನ್ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
https://twitter.com/Aaayushiiiiiii/status/1717838178285916513?ref_src=twsrc%5Etfw%7Ctwcamp%5Etweetembed%7Ctwterm%5E1717838178285916513%7Ctwgr%5E0d172dcdcdf6723e4d6f49b6ab40eff619dc49cc%7Ctwcon%5Es1_c10&ref_url=https%3A%2F%2Fapi-news.dailyhunt.in%2F
ರಿಯಾ ಕುಕು ಹೆಸರಿನ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಯುವತಿಯೊಬ್ಬಳು ತನ್ನ ಲೈಫ್ ಪಾರ್ಟ್ನರ್ಗಾಗಿ ಹುಡುಕಾಟ ನಡೆಸುತ್ತಿದ್ದು, ಆಕೆಯನ್ನು ಮದುವೆಯಾಗುವ ಹುಡುಗನಿಗೆ ಏನೆಲ್ಲ ಅರ್ಹತೆ ಇರಬೇಕು ಎಂದು ಕೇಳಿದರೆ ನೀವು ಅಚ್ಚರಿಗೊಳ್ಳುವುದು ಖಚಿತ. ಆಕೆಯ ಕಂಡೀಷನ್ ಏನೆಲ್ಲ ಎಂದು ಗಮನಿಸಿದರೆ,
* ಆಕೆಗೆ ರೀಲ್ಸ್ ಪಾರ್ಟ್ನರ್ ಕಮ್ ವರ ಬೇಕಂತೆ.
* ಆಕೆಯನ್ನು ಮದುವೆಯಾಗುವ ವ್ಯಕ್ತಿ ಕ್ಯಾಮೆರಾ ಕಂಡರೆ ನಾಚಿಕೆ ಪಡಬಾರದು.
* ಈಕೆಯ ಜೊತೆಗೆ ರಿಲೇಶನ್ಶಿಪ್ ರೀಲ್ಸ್ (ಕಪಲ್ ರೀಲ್ಸ್) ಮಾಡಲು ರೆಡಿಯಿರಬೇಕು.
* MOI-MOI ನಂತಹ ಟ್ರೆಂಡಿಂಗ್ ಮ್ಯೂಸಿಕ್ಗೆ ಹೇಗೆ ರೀಲ್ಸ್ ಮಾಡುವ ಜ್ಞಾನವಿರಬೇಕು.
* ಜಾಯಿಂಟ್ ಫ್ಯಾಮಿಲಿ (ಅವಿಭಕ್ತ ಕುಟುಂಬ) ಆಗಿರಬಾರದು.
*ಈಕೆಯನ್ನು ಸಂಪರ್ಕಿಸುವ ಮೊದಲು ಅಮೇಜಾನ್ ಮಿನಿ ಟಿವಿಯಲ್ಲಿ ಬರುವ ಹಾಫ್ ಲವ್ ಹಾಫ್ ಅರೇಂಜ್ಡ್ (Half Love Half Arranged) ವೆಬ್ ಸೀರೀಸ್ ನೋಡಿರಬೇಕಂತೆ. ಇದರಿಂದ ಯುವತಿ ಯಾವ ರೀತಿಯ ಹುಡುಗರನ್ನು ಇಷ್ಟಪಡುವುದಿಲ್ಲ ಎಂಬುದು ತಿಳಿಯುತ್ತದಂತೆ.
*ಆಕೆಯನ್ನು ಮದುವೆಯಾಗುವ ಹುಡುಗ ಪ್ರೀಮಿಯರ್ ಪ್ರೊ (Adobe Premiere Pro) ಬಗ್ಗೆ ಅರಿತಿರಬೇಕಂತೆ. ಹೀಗಿದ್ದಾಗ ಮಾತ್ರವೇ ಈಕೆಯ ರೀಲ್ಸ್, ವ್ಲೋಗ್ಸ್ ಗಳನ್ನ ಎಡಿಟ್ ಮಾಡಬಹುದಂತೆ. ರಿಯ ಅವರನ್ನು riya.kuku72@gmail.com ಸಂಪರ್ಕಿಸಲು ಇಚ್ಛಿಸುವವರು ಇಲ್ಲಿ ಸಂದೇಶ ಕಳುಹಿಸಬಹುದು. ಈ ಜಾಹೀರಾತು ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸ ವೈರಲ್ ಆಗಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್ಸ್ ಗಳು ಹರಿದು ಬರುತ್ತಿವೆ.
ಇದನ್ನು ಓದಿ: PMMY Loan: ಸ್ವಂತ ಉದ್ಯಮದ ಕನಸು ಕಾಣುತ್ತಿದ್ದೀರೆ ?! ಈ ಅರ್ಹತೆಗಳಿದ್ದರೆ ಮುದ್ರಾ ಯೋಜನೆಯಡಿ ಸಿಗುತ್ತೆ ಸಾಲ ಸೌಲಭ್ಯ