Gruhalakshmi: 5 ಭಾಗ್ಯಗಳ ಮತ್ತೊಂದು ಯೋಜನೆ ಜಾರಿಗೆ ಸಿದ್ಧವಾದ ಗೌರ್ಮೆಂಟ್ !! ಈ ದಿನದಿಂದಲೇ ಖಾತೆಗೆ ಬರಲಿದೆ ಅಮೌಂಟ್ !!
latest news congress 5 guarantees When will the start Grilahakshmi Yojana
Gruhalakshmi: ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ನೀಡಲಾಗುತ್ತದೆ ಎಂದು ಸರ್ಕಾರ ಗ್ಯಾರಂಟಿ ನೀಡಿದೆ. ಆದರೆ ಗೃಹಲಕ್ಷ್ಮಿ ಯೋಜನೆ ಶುರುವಾಗೋದು ಯಾವಾಗ? ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಬರೋದು ಯಾವಾಗ? ಎಂಬ ಜನರ ಪ್ರಶ್ನೆಗೆ ಉತ್ತರ ಇಲ್ಲಿದೆ.
ಗೃಹಲಕ್ಷ್ಮಿಗೆ(Gruhalakshmi) ಯೋಜನೆಗೆ ನಾಳೆ ಅದ್ದೂರಿ ಚಾಲನೆ ದೊರೆಯಲಿದ್ದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಬುಧವಾರ ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸದ್ಯ ಜುಲೈ 20 ರಿಂದ ಈ ಯೋಜನೆಗೆ ಅರ್ಜಿ(ಅರ್ಜಿ) ಸಲ್ಲಿಸಬಹುದಾಗಿದೆ. ಗ್ರಾಮ್ ಒನ್, ಬೆಂಗಳೂರು ಒನ್, ನಾಡ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 16 ರಂದು ಸರ್ಕಾರ ಎರಡು ಸಾವಿರ ರೂಪಾಯಿ ಹಾಕಲಿದೆ ಎಂದು ಮಾಹಿತಿ ದೊರೆತಿದೆ.
ಈ ಗೃಹಲಕ್ಷ್ಮಿ ಯೋಜನೆ ಮೂಲಕ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಣವನ್ನು ಸರ್ಕಾರ ಹಾಕಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನು ಓದಿ: Anchor Anushree: ಡಾಗ್ ಫುಡ್ ಅನ್ನು ಪೂರ್ತಿ ಚಪ್ಪರಿಸಿ ತಿಂದ ನಿರೂಪಕಿ ಅನುಶ್ರೀ – ಶೀ ಶೀ ಏನಿದು ಅನುಶ್ರೀ……..?