Hansika Motwani: ಅಟ್ಲೀಸ್ಟ್ ‘ಅದನ್ನಾದ್ರೂ’ ಟಚ್ ಮಾಡಲು ಬಿಡಿ ಎಂದು ನಿರ್ದೇಶಕರೆದುರೇ ನಟಿ ಹನ್ಸಿಕಾಳನ್ನು ಬೇಡಿಕೊಂಡ ನಟ !! ಮುಂದೇನಾಯ್ತು?

latest news cinima news Hansika Motwani latest news

Hansika Motwani: ಬಾಲನಟಿಯಾಗಿ ಹಿಂದಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ಹನ್ಸಿಕಾ ಮೋಟ್ವಾನಿ (Hansika Motwani), ನಂತರ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ಮಿಂಚಿದರು. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಹನ್ಸಿಕಾ ನಟಿಸಿದ್ದಾರೆ. ಕನ್ನಡದಲ್ಲಿಯೂ ಹನ್ಸಿಕಾ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಿಂದಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದರು.ಒಟ್ಟಿನಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ನಟಿಸಿರುವ ಬಹುಭಾಷ ನಟಿ ಹನ್ಸಿಕಾಗೆ ಅಭಿಮಾನಿ ಬಳಗವು ದೊಡ್ಡದಾಗಿದೆ.

ಹನ್ಸಿಕಾ ಮೋಟ್ವಾನಿ ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ. ಸದ್ಯ ಇತ್ತೀಚೆಗೆ ಅವರು ಹಾರ್ಮೋನ್ ಇಂಜೆಕ್ಷನ್ (ಹಾರ್ಮನ್ ಇಂಜೆಕ್ಷನ್) ಕುರಿತಂತೆ ಬಹಳ ಚರ್ಚೆಗೆ ಗುರಿಯಾಗಿದ್ದರು.

ಯುವತಿಯಂತೆ ಕಾಣಲು ಈಕೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಾಗಿತ್ತು. 31 ವರ್ಷದ ಹನ್ಸಿಕಾ ಮೋಟ್ವಾನಿ 2007 ರಲ್ಲಿ ಹಿಮೇಶ್ ರೇಶ್ಮಿಯಾ ಅವರ ‘ಆಪ್ಪಾ ಸುರೂರ್’ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು, ಅವರ ದೈಹಿಕ ರೂಪಾಂತರವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಆಗಲೇ ಗುಸುಗುಸು ಶುರುವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ ಇಂಜೆಕ್ಷನ್ ಬಳಸಿದ್ದು, ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿದೆ. ಕೊನೆಗೆ ಈ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟು ಎಲ್ಲವೂ ಸುಳ್ಳು ಎಂದು ಹೇಳಿದ್ದರು.

ಇದೀಗ ಮತ್ತೊಮ್ಮೆ ಸಕತ್ ಸೌಂಡ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರ ವಿರುದ್ಧ ಕಾಳಿವುಡ್ ಹಾಸ್ಯ ನಟ ರೋಬೋ ಶಂಕರ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಪಾರ್ಟನರ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರೋಬೋ ಶಂಕರ್ ಅವರು ನಟಿ ಹನ್ಸಿಕಾ ಕುರಿತು ಹೇಳಿಕೆ ನೀಡಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಚಿತ್ರದ ಕುರಿತು ಮಾತನಾಡಿದ ರೋಬೋ ಶಂಕರ್ ಅವರು ತಾವು ಹನ್ಸಿಕಾರ ಜೊತೆ ಒಂದು ದೃಶ್ಯ ಮಾಡುವಾಗ ಬೇಸರದ ಅನುಭವವನ್ನು ಹಂಚಿಕೊಂಡಿದ್ದಾರೆ.
‘ಹನ್ಸಿಕಾ ಮೊಟ್ವಾನಿ ಅವರು ನಿಜವಾಗಿಯೂ ಮೇಣದ ಬೊಂಬೆಯಂತೆ ಇದ್ದಾರೆ, ಚಿತ್ರದಲ್ಲಿಯೂ ಅದೇ ರೀತಿ ಕಾಣಿಸಿಕೊಳ್ಳುತ್ತಾರೆ. ಅವರು ಮೈದಾ ಹಿಟ್ಟಿನಂತೆ ಬೆಳ್ಳಗೆ ಇದ್ದಾರೆ ಎಂಬುದೂ ನಿಜವೇ. ಆದರೆ ಚಿತ್ರದಲ್ಲಿ ನಾನು ಹನ್ಸಿಕಾ ಅವರ ಕಾಲನ್ನು ಸ್ಪರ್ಶಿಸುವ ದೃಶ್ಯವಿದೆ. ಆದರೆ ತಮ್ಮ ಪಾದವನ್ನು ಮುಟ್ಟಲು ನೀಡಲಿಲ್ಲ’ ಎಂದು ರೋಬೋ ಶಂಕರ್ ಹೇಳಿದ್ದಾರೆ.

ಆದರೆ ಅವರು ಮುಂದುವರೆದು ಮಾತನಾಡುತ್ತಾ, ಕೊನೆಯ ಪಕ್ಷ ಹೆಬ್ಬೆರಳನ್ನಾದರೂ ಮುಟ್ಟಲು ಅವಕಾಶ ಕೊಡಿ ಎಂದು ನಾನು ಕೇಳಿದೆ. ನಿರ್ದೇಶಕರೂ ಇದನ್ನೇ ಕೇಳಿದರು. ಆದರೆ ಎಷ್ಟು ಬೇಡಿಕೊಂಡರೂ ಅವರು ಅದಕ್ಕೆ ಒಪ್ಪಲಿಲ್ಲ. ನಾಯಕ ಆದಿ ಮಾತ್ರ ತಾನಾಗಿಯೇ ಟಚ್ ಮಾಡಬಹುದು, ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ, ಇದೀಗ ಈ ವಿಚಾರ ಸಕತ್ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಹನ್ಸಿಕಾ ಅವರ ವರ್ತನೆಯಿಂದ ನಿರ್ದೇಶಕರ ಜೊತೆಗೆ ಸೆಟ್‌ನಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು ಎಂದು ರೋಬೋ ಶಂಕರ್ ಹೇಳಿದ್ದಾರೆ.

ಈ ಚಿತ್ರದಲ್ಲಿ ನಾಯಕ ಆದಿ ಜೊತೆ ನಟಿ ಹನ್ಸಿಕಾ ಮೋಟ್ವಾನಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ಯೋಗಿ ಬಾಬು, ಮುನಿಷ್ಕಾಂತ್, ಜಾನ್ ವಿಜಯ್ ಮತ್ತು ಇತರರು ನಟಿಸುತ್ತಿದ್ದಾರೆ. ಸಿನಿಮಾವನ್ನು ಮನೋಜ್ ದಾಮೋದರನ್ ನಿರ್ದೇಶಿಸಿದ್ದಾರೆ.

Leave A Reply

Your email address will not be published.