Shubman Gill- Sara Ali Khan: ಶುಭ್​​ಮನ್ ಗಿಲ್ – ಸಾರಾ ಅಲಿ ಖಾನ್ ಡೇಟಿಂಗ್ ಖತಂ ? ಇಲ್ಲಿದೆ ನೋಡಿ ಸಾಕ್ಷಿ

Shubman Gill - Sara Ali Khan breakup has gone viral

Shubman Gill- Sara Ali-Khan: ಟೈಟಾನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ (Shubman Gill) ಮತ್ತು ಬಾಲಿವುಡ್‌ ನಟಿ, ಸೈಫ್ ಅಲಿ ಖಾನ್ (Saif Ali Khan) ಮಗಳು ಸಾರಾ ಅಲಿ ಖಾನ್ ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವಾರು ದಿನಗಳಿಂದ ಹಬ್ಬಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಈ ಜೋಡಿ ಹಲವು ಕಡೆ ಸೋಷಿಯಲ್ಸ್ ಕಣ್ಣಿಗೆ ಬಿದ್ದಿದ್ದರು. ಇದೀಗ ಶುಭ್​​ಮನ್ ಗಿಲ್ – ಸಾರಾ ಅಲಿ ಖಾನ್ (Shubman Gill- Sara Ali-Khan) ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ಧಿ ವೈರಲ್ ಆಗುತ್ತಿದೆ. ಇದಕ್ಕೆ ಸಾಕ್ಷಿ ಕೂಡ ಇಲ್ಲಿದೆ ನೋಡಿ.

ಸಾಕಷ್ಟು ಕಡೆಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಈ ಹಿಂದೆ ಹೋಟೆಲ್ ಒಂದರಲ್ಲಿ ಇಬ್ಬರೂ ಭೇಟಿ ಆಗಿದ್ದರು. ಹಾಗೇ ನಂತರದಲ್ಲಿ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು. ನಿಲ್ದಾಣದಲ್ಲಿ ಇಬ್ಬರೂ ಮಾತನಾಡುತ್ತಿದ್ದರು ಎಂಬಿತ್ಯಾದಿ ವಿಚಾರಗಳು ವೈರಲ್ ಆಗಿ, ಶುಭ್​​ಮನ್ ಗಿಲ್ – ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಬ್ರೇಕಪ್ ಸುದ್ಧಿ ಕೇಳಿಬರುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ, ಸಾರಾ ಅಲಿ ಖಾನ್ ಮತ್ತು ಶುಭ್​ಮನ್ ಗಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ.
ಇದು ಸೋಷಿಯಲ್ಸ್ ಕಣ್ಣಿಗೆ ಬಿದ್ದಿದೆ. ಹಾಗಾಗಿ ಇವರಿಬ್ಬರು ಬ್ರೇಕಪ್ ಮಾಡಿಕೊಂಡರು, ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಶುಭ್​ಮನ್ ಗಿಲ್​ ಹೆಸರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್​ ಜೊತೆಗೆ ತಳುಕು ಹಾಕಿಕೊಂಡಿತ್ತು.

ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಶುಭ್​ಮನ್ ಗಿಲ್ ಹೆಸರು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಐಪಿಎಲ್ 2023ರಲ್ಲಿ 3 ಶತಕ ಸಿಡಿಸುವ ಮೂಲಕ ಗಿಲ್​ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಐಪಿಎಲ್ 2023ರಲ್ಲಿ ಶತಕದ ಬಳಿಕ ಆರೆಂಜ್​ ಕ್ಯಾಪ್​ ಹೋಲ್ಡರ್​ ಸಹ ಆಗಿದ್ದು, ಭಾರತೀಯ ಕ್ರಿಕೆಟ್​ನಲ್ಲಿ ಪ್ರಿನ್ಸ್ ಎಂದೇ ಪ್ರಸಿದ್ಧರಾಗಿದ್ದಾರೆ.

 

ಇದನ್ನು ಓದಿ: Siddaramaiah Cabinet Expansion: 24 ನೂತನ ಸಚಿವರು ಸೇರಿ 34 ಮಂದಿಗೆ ಖಾತೆ ಹಂಚಿಕೆ!! ಯಾರಿಗೆ ಯಾವ ಖಾತೆ?

Leave A Reply

Your email address will not be published.