Actress Alia Bhatt: ‘ರಣಬೀರ್ ಸನ್ಯಾಸಿ ಸ್ವಭಾವಿ, ನನ್ನ ಮಾತು ಅವರಿಗೆ ಇಷ್ಟವಾಗಲ್ಲ’ ; ಆಲಿಯಾ ಪತಿಯ ಬಗ್ಗೆ ಹಿಗ್ಯಾಕೆ ಹೇಳಿದ್ರು?

Actress Alia Bhatt says Ranbir Kapoor does not like her Speaking

Actress Alia Bhatt: ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Actress Alia Bhatt) ಸ್ಟಾರ್ ನಟಿಯರಲ್ಲಿ ಒಬ್ಬರು. ನಟಿ ಆಸ್ಕರ್ ಪ್ರಶಸ್ತಿ ಪಡೆದ RRR, ಬ್ರಹ್ಮಾಸ್ತ್ರ, ಗಂಗೂಭಾಯಿ ಕಾಠಿಯಾವಾಡಿಯಂತಹ ಹಿಟ್ ಸಿನಿಮಾಗಳನ್ನು ನೀಡಿದ್ದು, ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ನಟಿ ಆಲಿಯಾ ಭಟ್, ನಟ ರಣಬೀರ್ ಕಪೂರ್ (Ranbir kapoor) ಅವರನ್ನು ಮದುವೆಯಾಗಿದ್ದು, ಇವರಿಗೆ ಮುದ್ದಾದ ರಾಹಾ ಹೆಸರಿನ ಹೆಣ್ಣು ಮಗುವಿದೆ. ಸದ್ಯ ನಟಿ ಅಲಿಯಾ ಸಂದರ್ಶನವೊಂದರಲ್ಲಿ ತಮ್ಮ ಪತಿಯ ಬಗ್ಗೆ ಮಾತನಾಡಿದ್ದು, “ ರಣಬೀರ್ ಸನ್ಯಾಸಿ ಸ್ವಭಾವಿ, ನಾನು ಜೋರಾಗಿ ಮಾತಾಡಿದ್ರೆ ಅವರಿಗೆ ಇಷ್ಟವಾಗಲ್ಲ” ಎಂದು ಹೇಳಿದ್ದಾರೆ. ಅಷ್ಟಕ್ಕೂ ನಟಿ ಯಾಕೆ ಹೀಗೆ ಹೇಳಿದ್ರು?

ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಆಲಿಯಾ ಭಟ್ ತಮ್ಮ ಹಾಗೂ ಪತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ನಟಿ ಆಲಿಯಾ ಅವರಿಗೆ ಮನೆಯ ಊಟ ಎಂದರೆ ತುಂಬಾ ಇಷ್ಟವಂತೆ. ದಾಲ್-ಚಾವಲ್, ಬೆಂಡಿ ಕಿ ಸಬ್ಜಿ, ತಡ್ಕಾ ದಹಿ, ಉಪ್ಪಿನಕಾಯಿ ಮತ್ತು ಸಿಹಿತಿಂಡಿಯಲ್ಲಿ ಮಿಲ್ಕ್ ಕೇಕ್ ತುಂಬಾ ಇಷ್ಟ ಎಂದು ನಟಿ ಆಲಿಯಾ ಹೇಳಿದ್ದಾರೆ.

ಇನ್ನು ಅಲಿಯಾ ತಮ್ಮ ಕೋಪದ ಬಗ್ಗೆ ಮಾತನಾಡಿದ್ದು, “ ನನಗೆ ಯಾವುದೇ ವಿಚಾರದಲ್ಲಾದ್ರೂ ಸ್ಪರ್ಧಿಸಲು ಸಾಧ್ಯವಾಗದೇ ಇದ್ದಾಗ ನನಗೆ ಬೇಗನೆ ಕೋಪ ಬರುತ್ತದೆ” ಎಂದು ಹೇಳಿದರು. ಹಾಗೇ ಪತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡಿ, “ರಣಬೀರ್ ಗೆ ನಾನು ಧ್ವನಿ ಏರಿಸಿ ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ. ಜೋರಾಗಿ ಮಾತಾಡೋದು ಸಮಸ್ಯೆಗೆ ಪರಿಹಾರವಲ್ಲ ಎಂಬುವುದು ರಣಬೀರ್ ನಿಲುವಾಗಿದೆ. ಅತೃಪ್ತರಾದಾಗಲು ಶಾಂತವಾಗಿರಬೇಕೆಂದು ಅವರು ಬಯಸುತ್ತಾರೆ. ರಣಬೀರ್​ಗೆ ಸನ್ಯಾಸಿಯಂತಹ ಮನಸ್ಸು ಇದೆ. ಅವರು ಶಾಂತ ಸ್ವಭಾವದವರು ಅದರ ಬಗ್ಗೆ ನಾನೇ ಅಸೂಯೆ ಪಟ್ಟಿದ್ದೇನೆ‌.” ಎಂದು ಆಲಿಯಾ ಹೇಳಿದರು.

ತಮ್ಮ ಸಿನಿಮಾ ಗಂಗೂಭಾಯಿ ಕಾಠಿಯಾವಾಡಿ ಬಗ್ಗೆ ಮಾತನಾಡಿ, ಈ ಸಿನಿಮಾದ ಯಶಸ್ಸು ನನ್ನ ಹೆಮ್ಮೆಯ ಕ್ಷಣವಾಗಿದೆ. ಡ್ರೀಮ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಇದು ನನ್ನ ಮೊದಲ ಚಿತ್ರ. ನಾವಿಬ್ಬರೂ ಈ ಸಿನಿಮಾ ಒಟ್ಟಿಗೆ ಮಾಡಿದ್ದು ನನಗೆ ಖುಷಿ ಕೊಟ್ಟಿದೆ ಎಂದು ಆಲಿಯಾ ಹೇಳಿದರು.

ಅಲಿಯಾ ಭಟ್ ಮತ್ತು ರಣ್’ಬೀರ್ ಕಪೂರ್ ಏಪ್ರಿಲ್ 14 ರಂದು ಮುಂಬೈನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾದರು. ಈ ದಂಪತಿಗೆ ನವೆಂಬರ್ 6, 2022ರಂದು ಮುದ್ದಾದ ಹೆಣ್ಣು ಮಗು ಜನಿಸಿದೆ. ಮಗಳಿಗೆ ರಣಬೀರ್ ಜೋಡಿ ರಾಹಾ ಎಂದು ಹೆಸರಿಟ್ಟಿದ್ದಾರೆ. ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿರುವ ನಟಿ ಆಲಿಯಾ ಇದೀಗ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗ್ತಿದ್ದಾರೆ.

ಆಲಿಯಾ ಭಟ್ ಶೀಘ್ರದಲ್ಲೇ ಕರಣ್ ಜೋಹರ್ (Karan Johar) ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಹಾಲಿವುಡ್ ಮೂವು ‘ಹಾರ್ಟ್ ಆಫ್ ಸ್ಟೋನ್’ ನಲ್ಲಿ ಗಾಲ್ ಗಡೋಟ್ ಮತ್ತು ಜೇಮೀ ಡೋರ್​ನ್​ ಅವರೊಂದಿಗೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:Nawazuddin Siddiqui- ರಿಷಬ್ ಶೆಟ್ಟಿ ಭೇಟಿ ಬಗ್ಗೆ ಮಾತನಾಡಿದ ನವಾಜುದ್ದೀನ್ ಸಿದ್ಧಿಕಿ! ಕಾಂತರ-2 ನಲ್ಲಿ ನಟಿಸ್ತಾರಾ ಈ ಬಾಲಿವುಡ್ ಸ್ಟಾರ್!

Leave A Reply

Your email address will not be published.