Home Breaking Entertainment News Kannada Shiva Rajkumar: ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್‌ ಕುಮಾರ್‌ ಚುನಾವಣಾ ಪ್ರಚಾರದ ಕಿಡಿ- ಹ್ಯಾಟ್ರಿಕ್‌ ಹೀರೋ...

Shiva Rajkumar: ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್‌ ಕುಮಾರ್‌ ಚುನಾವಣಾ ಪ್ರಚಾರದ ಕಿಡಿ- ಹ್ಯಾಟ್ರಿಕ್‌ ಹೀರೋ ಶಿವಣ್ಣ ನೀಡಿದ್ರು ಸ್ಪಷ್ಟನೆ

Shiva Rajkumar
Image source: one India

Hindu neighbor gifts plot of land

Hindu neighbour gifts land to Muslim journalist

Shiva Rajkumar: ವರುಣಾ ಕ್ಷೇತ್ರದಲ್ಲಿ ಹೀರೋ ಶಿವರಾಜ್ ಕುಮಾರ್(Shiva Rajkumar) ಅವರು ಮೇ 04 ರಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದು, ಇದಕ್ಕೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.

ಆದರೆ ಸಿದ್ದರಾಮಯ್ಯ (Siddaramaiah) ಪರವಾಗಿ ವರುಣಾ ಕ್ಷೇತ್ರದಲ್ಲಿ ಶಿವರಾಜ್ ಕುಮಾರ್ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ, ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha) ಅವರು ಶಿವರಾಜ್ ಕುಮಾರ್ ಅವರ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಹೌದು, ಸಿದ್ದರಾಮಯ್ಯ ಪ್ರಚಾರದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವರ ಭಾವ ಭಕುತಿಗೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದರು.

ಪ್ರತಾಪ್ ಸಿಂಹ ಅವರ ಅಸಮಾಧಾನ ಕುರಿತು ಸ್ವತಃ ಶಿವರಾಜ್ ಕುಮಾರ್ ಅವರು ಶಿವಮೊಗ್ಗದಲ್ಲಿ ಇಂದು(ಮೇ 05) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವಿ.ಸೋಮಣ್ಣ, ಪ್ರತಾಪಸಿಂಹ ನಮಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ನಮಗೆ ಗೌರವ ಇದೆ. ಸೋಮಣ್ಣ ವರುಣಾದಲ್ಲಿ(Varuna) ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಕರೆದರೆ ಅವರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯವರು ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೊಂದೆಡೆ ಶಿವರಾಜ್ ಕುಮಾರ್ ನಡೆಗೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಕೂಡಾ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ್ದರೂ ತಮ್ಮ ಎದುರಾಳಿ ಪರ ಶಿವರಾಜ್ ಕುಮಾರ್ ಪ್ರಚಾರ ಮಾಡಿರುವುದು ಬೇಸರ ಉಂಟುಮಾಡಿದೆ ಎಂದಿದ್ದರು.

ಸದ್ಯ ಶಿವರಾಜ್ ಕುಮಾರ್​ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದು, ಸೋಮಣ್ಣ ಸಹ ಶಿವರಾಜ್ ಕುಮಾರ್ ಅವರನ್ನು ಪ್ರಚಾರಕ್ಕೆ ಕರೆಯುತ್ತಾರ ಎಂಬುದು ಪ್ರಶ್ನೆಯಾಗಿ ಉಳಿದಿದೆ .

ಇದನ್ನೂ ಓದಿ:  ನೆದರ್ಲೆಂಡ್​ನ ರೆಡ್​ಲೈಟ್​ ಏರಿಯಾದಲ್ಲಿ ಸೆಕ್ಕಿಬಿದ್ದ ಬಾಲಿವುಡ್ ನಟಿ! ರೋಚಕ ಅನುಭ ತೆರಿದಿಟ್ಟ ಈಕೆ ಹೇಳಿದ್ದೇನು?