Home Breaking Entertainment News Kannada Actress Purna : ‘ನಟಿ ಪೂರ್ಣ ಜೊತೆ ನನಗೆ ಲವ್ ಇದೆ’- ಶಾಕಿಂಗ್ ಮಾಹಿತಿ ನೀಡಿದ...

Actress Purna : ‘ನಟಿ ಪೂರ್ಣ ಜೊತೆ ನನಗೆ ಲವ್ ಇದೆ’- ಶಾಕಿಂಗ್ ಮಾಹಿತಿ ನೀಡಿದ ನಟ, ನಿರ್ದೇಶಕ ರವಿಬಾಬು

Actress Shamna Kasim

Hindu neighbor gifts plot of land

Hindu neighbour gifts land to Muslim journalist

Actress Shamna Kasim: ದಕ್ಷಿಣ ಭಾರತದ ಖ್ಯಾತ ನಟಿ, ಜೋಶ್ ಸಿನಿಮಾ(Josh movie) ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದ ಚೋರಿ ಪೂರ್ಣ(Poorna) ಕಳೆದ ಅಕ್ಟೋಬರ್‌ 25ರಂದು ಉದ್ಯಮಿ ಶನೀದ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್ (Actress Shamna Kasim)ಎಂದು ಹೆಚ್ಚಿನವರಿಗೆ ತಿಳಿದಿಲ್ಲ.ಬಹುಭಾಷಾ ನಟಿ ಶಾಮ್ನಾ ಕಾಸೀಮ್‌ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಲಾಲನೆ ಪಾಲನೆಯಲ್ಲಿ ಖುಷಿ ಕಾಣುತ್ತಿದ್ದಾರೆ.

ಮಲಯಾಳಂನ ಮಂಜು ಪೋಲೂರು ಪೆಂಕುಟ್ಟಿ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದ ನಟಿ ಪೂರ್ಣಾ ಅವರು ಸಿನಿಮಾದಲ್ಲಿ ಧನ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ ಶ್ರೀಮಹಾಲಕ್ಷ್ಮಿ, ತಮಿಳಿನ ಕೊಡೈಕನಾಲ್ ಕನ್ನಡದ ಜೋಶ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಮಿಂಚಿದ್ದಾರೆ. ಕನ್ನಡದ ಜೋಶ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿದೆ.

ರವಿಬಾಬು ಅವರು ಟಾಲಿವುಡ್​ನಲ್ಲಿ ನಟ ಮತ್ತು ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ, ನಟ ಹಾಗೂ ನಿರ್ದೇಶಕ ರವಿಬಾಬು ನಟಿ ಶಾಮ್ನಾ ಖಾಸಿಂ ಅಲಿಯಾಸ್​ ಪೂರ್ಣ ಅವರ ಕುರಿತ ಕಾಮೆಂಟ್ ಮಾಡಿದ್ದಾರೆ. ರವಿಬಾಬು ಅವರ ಸಿನಿಮಾಗಳಾದ ಯಾ ಯಾ 2, ಲಡ್ಡು ಬಾಬು, ಅಡುಗೋದಲ್ಲಿ ಪೂರ್ಣಾ ನಟಿಸಿದ್ದಾರೆ. ಈ ಹಿಂದೆ ಅವರಿಬ್ಬರ ನಡುವೆ ಸಂಬಂಧವಿದೆ ಎಂಬ ವದಂತಿಗಳೂ ಬಂದಿದ್ದವು. ಇತ್ತೀಚೆಗಷ್ಟೇ ರವಿಬಾಬು ನಿರ್ದೇಶನದ ಪೂರ್ಣಾ ಮುಖ್ಯ ನಾಯಕಿಯಾಗಿ ನಟಿಸಿರುವ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಪ್ರಚಾರದ ಅಂಗವಾಗಿ ರವಿಬಾಬು ನೀಡಿದ ಸಂದರ್ಶನದಲ್ಲಿ ಪೂರ್ಣಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ರವಿಬಾಬು, ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ನಟನೆಯ ಜೊತೆಗೆ ಕಾಲಕಾಲಕ್ಕೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದರು ಕೂಡ ನಿರ್ದೇಶಕರಾಗಿ ರವಿಬಾಬು(RaviBabu) ಅವರ ಸಿನಿಮಾಗಳು ಹೆಚ್ಚು ಯಶಸ್ಸು ಕಂಡಿಲ್ಲ. ಇತ್ತೀಚೆಗೆ ರವಿಬಾಬು ಅವರ ಸಿನಿಮಾಗಳಲ್ಲಿ ನಾಯಕಿ ಪೂರ್ಣಾ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಪೂರ್ಣ ಅವರನ್ನೇ ಏಕೆ ತಮ್ಮ ಸಿನಿಮಾಗಳಲ್ಲಿ (Cinema)ಆಯ್ಕೆ ಮಾಡಿಕೊಳ್ಳುವುದು ಎಂಬ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

ಪೂರ್ಣಾ ಅವರನ್ನು ತಮ್ಮ ಸಿನಿಮಾಗಳಲ್ಲಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ಬಗ್ಗೆ ರವಿಬಾಬು ಮಾತನಾಡಿದ್ದು, ತನಗೆ ಪೂರ್ಣಾ ಜೊತೆ ಲವ್ ಅಫೇರ್ ಇದ್ದು, ಆದರೆ, ಆ ಸಂಬಂಧ ನೀವು ಅಂದುಕೊಂಡ ರೀತಿಯದ್ದಲ್ಲ. ಪ್ರತಿಯೊಬ್ಬ ನಿರ್ದೇಶಕರು ತಮ್ಮ ಕಲಾವಿದರೊಂದಿಗೆ ಪ್ರೀತಿಯನ್ನು ಹೊಂದಿರುತ್ತಾರೆ. ನನಗೂ ಪೂರ್ಣಾ ಅವರಿಗೂ ಕೂಡ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾರೆ. ಪೂರ್ಣಾ ಅವರು ನಿರ್ದೇಶಕರು ಹೇಳುವುದಕ್ಕಿಂತ ಉತ್ತಮ ನಟನೆ ಮಾಡುತ್ತಾರೆ. ನನ್ನ ಸಿನಿಮಾಗಳ ನಾಯಕಿ ಈಗ ಎಲ್ಲರಿಗೂ ನೆನಪಾಗುತ್ತಿದ್ದು, ಆದರೆ, ನಾನು ನಿರ್ದೇಶಕನಾಗಿರುವ ಹಿನ್ನೆಲೆ ನನ್ನ ಎಲ್ಲ ಸಿನಿಮಾಗಳನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಕತೆ ಇಷ್ಟವಾದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ನನ್ನ ಮುಂದಿನ ಚಿತ್ರವಾದ ವಾಷಿಂಗ್ ಮೆಷಿನ್‌ನಲ್ಲಿ ನಟಿಸುವಂತೆ ನಾನು ಪೂರ್ಣ ಅವರ ಬಳಿ ಮನವಿ ಮಾಡಿದ್ದೆ. ಆದರೆ ಬೇಡ ಎಂದಿದ್ದು, ಅದು ಬಿಟ್ಟರೆ ನನಗಾಗಿ ನನ್ನ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ ಎಂದು ರವಿಬಾಬು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ : Karnataka Election: ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದು ಹೇಗೆ?ಸಂಪೂರ್ಣ ವಿವರ ಇಲ್ಲಿದೆ