IPL 2023 : ಟಿವಿಯಲ್ಲಿ ಐಪಿಎಲ್ ವೀಕ್ಷಣೆಗಿಂತ ಡಿಜಿಟಲ್ ನಲ್ಲಿ ಹೆಚ್ಚಿದ ವೀಕ್ಷಣೆ!!!

IPL Match 2023 : ಈಗಾಗಲೇ ಐಪಿಎಲ್ ಕ್ರಿಕೆಟ್ ಪಂದ್ಯ ಆರಂಭವಾಗಿದ್ದು, ಹೆಚ್ಚಿನ ಜನರಿಗೆ ಐಪಿಎಲ್ ನೋಡುವ ಕ್ರೇಜ್ ಇದ್ದೇ ಇರುತ್ತದೆ. ಆದರೆ ವಿಶೇಷವೇನೆಂದರೆ ಈ ಬಾರಿಯ ಐಪಿಎಲ್-2023(IPL Match 2023) ಓಪನಿಂಗ್ ಮ್ಯಾಚ್ ಸಂದರ್ಭದಲ್ಲಿ ಅದರ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಆದರೆ ಇದೇ ವೇಳೆ ಈ ಮ್ಯಾಚನ್ನು ಡಿಜಿಟಲ್ ಮಾಧ್ಯಮದಲ್ಲಿ ನೋಡಿದವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಮಾಹಿತಿ ದೊರೆತಿದೆ.

ಈಗಾಗಲೇ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ, ಪಂದ್ಯಾವಳಿಯ ಅಧಿಕೃತ ಪ್ರಸಾರಕನಾದ ಸ್ಟಾರ್ ಸ್ಪೋರ್ಟ್ಸ್ ಆರಂಭಿಕ ಪಂದ್ಯಕ್ಕಾಗಿ 7.29 ರ ಟಿವಿಆರ್ ದಾಖಲಿಸಿದೆ. ಇದು 2021 ರ ಆವೃತ್ತಿಯ 8.25 ಮತ್ತು 2020ರ ಆವೃತ್ತಿಯ 10.36 ಗಿಂತ ಬಹಳ ಕಡಿಮೆಯಾಗಿದೆ.

2023ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಶೇ 33 ರಷ್ಟು ವೀಕ್ಷಕರು ಟಿವಿಯಲ್ಲಿ ನೋಡಿದ್ದಾರೆ. ಇದು ಕಳೆದ 6 ಐಪಿಎಲ್ ಸೀಸನ್‌ಗಳಲ್ಲಿ ಅತಿ ಕಡಿಮೆ ಪ್ರಮಾಣವಾಗಿದೆ.

ಇನ್ನು ಬಾರ್ಕ್ (BARC) ಅಂಕಿ ಅಂಶಗಳನ್ನು ಗಮನಿಸಿದರೆ , ಕಳೆದ ವರ್ಷ ಇದ್ದ ಶೇ 23.1 ವೀಕ್ಷಕರ ಪ್ರಮಾಣಕ್ಕೆ ಹೋಲಿಸಿದರೆ ಅದು ಈ ಬಾರಿ ಶೇ 22 ಆಗಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ನೋಡುವುದಾದರೆ, ಈ ಬಾರಿ ಜಿಯೊಸಿನಿಮಾ ಐಪಿಎಲ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಡಿಸ್ನಿ ಹಾಟ್‌ಸ್ಟಾರ್ ಪಂದ್ಯಾವಳಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರ ಮಾಡಿತ್ತು. ಆದರೆ ಜಿಯೊಸಿನೆಮಾ ಈ ಬಾರಿ ಡಿಸ್ನಿ ಹಾಟ್ ಸ್ಟಾರ್ ವೀಕ್ಷಕರ ಸಂಖ್ಯೆಯನ್ನು ಮೀರಿಸಿದೆ. ಪಂದ್ಯಾವಳಿ ಆರಂಭವಾದ ಮೊದಲ ವಾರದಿಂದಲೇ ಜಿಯೊ ಸಿನೆಮಾ ಡಿಸ್ನಿ ಹಾಟ್ ಸ್ಟಾರ್ ಗಿಂತ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.

ಇದುವರೆಗೆ ಡಿಸ್ನಿ ಹಾಟ್‌ಸ್ಟಾರ್ ಭಾರತದಲ್ಲಿ ಐಪಿಎಲ್ ಅನ್ನು ಸ್ಟೀಮ್ ಮಾಡುತ್ತಿತ್ತು ಮತ್ತು ಚಂದಾದಾರಿಕೆಗೆ ಪಾವತಿಸಿದವರು ಮಾತ್ರ ಪಂದ್ಯಗಳನ್ನು ವೀಕ್ಷಿಸಬಹುದಾಗಿತ್ತು. FIFA ವಿಶ್ವಕಪ್ 2022ರ ಮಲ್ಟಿ ಕ್ಯಾಮ್ ವೈಶಿಷ್ಟ್ಯದ ರೀತಿಯಲ್ಲಿಯೇ ಜಿಯೊ ಸಿನೆಮಾ ಕೂಡ ಬಳಕೆದಾರರಿಗೆ ಎಲ್ಲಾ 74 ಪಂದ್ಯಗಳಿಗೆ ಬಹು ಕ್ಯಾಮೆರಾ ಕೋನಗಳನ್ನು ಬದಲಾಯಿಸುವ ಅವಕಾಶ ನೀಡುತ್ತಿದೆ. ಜಿಯೊ ಫೀಚರ್ ಫೋನ್ ಈಗಾಗಲೇ ಜಿಯೊ ಸಿನೆಮಾವನ್ನು ಸಪೋರ್ಟ್ ಮಾಡುವುದರಿಂದ ಜಿಯೊ ಫೋನ್ ಬಳಕೆದಾರರು ಐಪಿಎಲ್ 2023 ಅನ್ನು ಉಚಿತವಾಗಿ ಸ್ಟೀಮ್ ಮಾಡಬಹುದು.

ಸದ್ಯ ಪಂದ್ಯಾವಳಿಯ ಪ್ರಥಮ ದಿನ ಜಿಯೊಸಿನೆಮಾ ವೀಕ್ಷಕರ ಸಂಖ್ಯೆ 50 ಕೋಟಿ ದಾಟಿದೆ. ಒಂದೇ ದಿನದಲ್ಲಿ 2.5 ಕೋಟಿ ಬಾರಿ ಜಿಯೊ ಸಿನೆಮಾ ಅಪ್ಲಿಕೇಶನ್ ಡೌನ್ಲೋಡ್ ಮಾಡಲಾಗಿದ್ದು, ಒಂದು ದಿನದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇನ್‌ಸ್ಟಾಲ್ ಆದ ಅಪ್ಲಿಕೇಶನ್ ಎಂದು ದಾಖಲೆ ಬರೆದಿದೆ.

ಇನ್ನು ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಚ್ ಅನ್ನು ಜಿಯೊ ಸಿನೆಮಾ ಮೇಲೆ ಒಟ್ಟು 6 ಕೋಟಿ ಜನ ವೀಕ್ಷಿಸಿದ್ದಾರೆ. ಒಂದೇ ಬಾರಿಗೆ ಅತ್ಯಧಿಕ 1.6 ಕೋಟಿ ಜನ ಈ ಮ್ಯಾಚ್ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ : Samantha Ruth Prabhu : ಸ್ಯಾಮ್ ಬಿಕಿನಿ ತ್ಯಜಿಸಿ ಬಿಳಿ ಶುಭ್ರ ಬಟ್ಟೆಯಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ? 

Leave A Reply

Your email address will not be published.