Home Latest Health Updates Kannada Astro Tips : ನಿಮ್ಮ ಅದೃಷ್ಟ ಬದಲಾಯಿಸಲು ಈ ಕೆಲಸ ಈ ಕೂಡಲೇ ಮಾಡಿ!

Astro Tips : ನಿಮ್ಮ ಅದೃಷ್ಟ ಬದಲಾಯಿಸಲು ಈ ಕೆಲಸ ಈ ಕೂಡಲೇ ಮಾಡಿ!

Hindu neighbor gifts plot of land

Hindu neighbour gifts land to Muslim journalist

ಜೀವನದಲ್ಲಿ ಶ್ರೀಮಂತನಾಗುವ ಬಯಕೆ ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ತನ್ನ ಜೀವನದಲ್ಲಿ ಅಪಾರ ಸಿರಿ-ಸಂಪತ್ತು ಇರಬೇಕು, ಕುಟುಂಬದ ಪ್ರತಿಯೊಂದು ಸಂತೋಷ ಮತ್ತು ದುಃಖವನ್ನು ನಿಭಾಯಿಸಬೇಕು ಎಂಬ ಬಯಕೆ ಇರುತ್ತದೆ. ಆದರೆ ಕೆಲವೊಮ್ಮೆ ವ್ಯಕ್ತಿಯ ದುರದೃಷ್ಟವು ಆತನ ಬೆನ್ನು ಬಿಡುವುದೇ ಇಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ, ಒಬ್ಬ ವ್ಯಕ್ತಿಯು ಫಲಿತಾಂಶವನ್ನು ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶ್ರೀಮಂತರಾಗುವ ಕನಸು ಎಲ್ಲೋ ಉಳಿದು ಬಿಡುತ್ತದೆ . ಆದರೆ ಇದೀಗ ನೀವು ನಿಮ್ಮ ಈ ಕನಸನ್ನು ಬಿಟ್ಟುಕೊಡುವ ಅವಶ್ಯಕತೆ ಇಲ್ಲ. ಹೌದು ಆರ್ಥಿಕ ಸಮಸ್ಯೆ ನಿಭಾಯಿಸಲು ತುಳಸಿ ಕಾರಣವಾಗಲಿದೆ.

ಮುಖ್ಯವಾಗಿ ತುಳಸಿ ತನ್ನದೇ ಆದ ಸ್ಥಾನ ಮಾನ ಹೊಂದಿದೆ. ಹಿಂದೂ ಸಂಪ್ರದಾಯ ಪ್ರಕಾರ ತುಳಸಿ ಬಗೆಗಿನ ಹಲವಾರು ನಂಬಿಕೆಗಳಿವೆ. ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಪ್ರತಿದಿನ ಪೂಜಿಸುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇನ್ನು ತುಳಸಿ ಗಿಡ ನೆಡುವುದರಿಂದ, ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಮನೆಯಲ್ಲಿ ಸಂತೋಷವು ಬರಲು ಪ್ರಾರಂಭಿಸುತ್ತದೆ ಎನ್ನಲಾಗುತ್ತದೆ. ತುಳಸಿಯನ್ನು ಪೂಜಿಸುವ ಮೂಲಕ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿಯ ಮೇಲೆ ಕೆಲವು ವಿಶೇಷ ಚಿಹ್ನೆಗಳನ್ನು ಹಾಕಿದರೆ ಅದೃಷ್ಟದ ಬೆಂಬಲ ಸಿಗುತ್ತದೆ ಎನ್ನಲಾಗುತ್ತದೆ.

  • ಶಂಖ ಎನ್ನುವುದು ಸಮುದ್ರದ ಆಳದಲ್ಲಿ ಇರುವ ಒಂದು ಜೀವಿ. ವಿಶೇಷ ಸುರುಳಿಯ ಆಕೃತಿಯಲ್ಲಿ ಇರುವ ಈ ಶಂಖದಲ್ಲಿ ಇರುವ ಜೀವಿ ಸತ್ತ ಬಳಿಕ ಇದನ್ನು ಒಂದು ನಾದವನ್ನು ಹೊರಡಿಸುವ ಸಾಧನವಾಗಿ ಬಳಸುತ್ತಾರೆ. ಈ ಸಾಧನವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆದುಕೊಂಡಿದೆ. ಶಂಖವು ಮಹಾನ್ ದೇವ ವಿಷ್ಣುವಿನೊಂದಿಗೆ ಸಂಪರ್ಕವನ್ನು ಪಡೆದುಕೊಂಡಿದೆ. ಪೂಜೆಯಲ್ಲಿ ಶಂಖದ ಬಳಕೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಅಷ್ಟೇ ಅಲ್ಲ ಬೆಳಗ್ಗೆ ಮತ್ತು ಸಂಜೆ ಶಂಖದ ಶಬ್ದವು ಪ್ರತಿಧ್ವನಿಸುವ ಮನೆಯಲ್ಲಿ, ನಕಾರಾತ್ಮಕತೆ ಎಂದಿಗೂ ಆ ಮನೆಯಲ್ಲಿ ಉಳಿಯುವುದಿಲ್ಲ. ಜೊತೆಗೆ ತುಳಸಿಯ ಕುಂಡದ ಮೇಲೆ ಶಂಖದ ಚಿತ್ರವನ್ನು ಬರೆಯುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಶ್ರೀ ವಿಷ್ಣುವಿನ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
  • ತುಳಸಿಯ ಕುಂಡದಲ್ಲಿ ಚಕ್ರದ ಗುರುತು ಅಥವಾ ಚಿಹ್ನೆಯನ್ನು ಬರೆದರೆ, ಅದು ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರಾಗುತ್ತವೆ. ಧನಾತ್ಮಕ ಶಕ್ತಿಯು ಮನೆಯಲ್ಲಿ ಸಂಚರಿಸುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ.
  • ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ, ಸ್ವಸ್ತಿಕ ಸಂಕೇತವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಪ್ರತಿಯೊಂದು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ನಾವು ಈ ಚಿಹ್ನೆಯನ್ನು ಕಾಣುತ್ತೇವೆ. ಇನ್ನು ತುಳಸಿ ಕುಂಡದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ತುಳಸಿ ಕುಂಡದ ಮೇಲೆ ಸ್ವಸ್ತಿಕ್ ಗುರುತು ಮಾಡುವುದರಿಂದ, ತಾಯಿ ಲಕ್ಷ್ಮಿಯ ಜೊತೆಗೆ ಶ್ರೀವಿಷ್ಣು ಕೂಡ ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಮನೆಯನ್ನು ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

ಹೌದು ಈ ಮೇಲಿನಂತೆ ತುಳಸಿ ಕುಂಡದ ಮೇಲೆ ಈ ರೀತಿ ನೀವು ಚಿನ್ಹೆಗಳನ್ನು ಬಿಡಿಸಿದಲ್ಲಿ ನಿಮ್ಮ ಸುತ್ತ ಇರುವ ನಕಾರಾತ್ಮಕ ಶಕ್ತಿ ದೂರವಾಗಿ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆದುಕೊಂಡು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು.