ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಖಂಡಿತಾ ಇಡಬೇಡಿ! ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ!

ನಮ್ಮ ಸುತ್ತಲಿನ ವಿಷಯಗಳು ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ಆರ್ಥಿಕ ಸಮೃದ್ಧಿಯನ್ನು ಬಯಸುತ್ತಾನೆ. ಜೇಬು ತುಂಬಾ ಹಣ ತುಂಬಿರಬೇಕು ಎಂದು ಬಯಸುತ್ತಾನೆ. ಹಲವರು ತಮ್ಮ ಪರ್ಸ್‌ನಲ್ಲಿ ಹಣದ ಜೊತೆಗೆ ಅನೇಕ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಈ ರೀತಿ ಇಟ್ಟುಕೊಳ್ಳುವ ಕೆಲವು ವಸ್ತುಗಳು ನಮಗೆ ತೊಂದರೆ ಉಂಟುಮಾಡಬಹುದು. ಅದರಲ್ಲೂ ಈ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ನಿಮ್ಮ ಪರ್ಸ್ ನಲ್ಲಿದ್ದಾರೆ ಕೂಡಲೆ ತೆಗೆಯಿರಿ. ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ.

ಶುಚಿತ್ವಕ್ಕೆ ಮಹತ್ವ :

ಕೆಲವರಿಗೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪರ್ಸ್‌ನಲ್ಲಿ ಇಡುವ ಅಭ್ಯಾಸವಿರುತ್ತದೆ. ಆದರೆ, ಶುಚಿತ್ವ ಇಲ್ಲದ ಕಡೆ ಲಕ್ಷ್ಮೀ ದೇವಿ ಇರಲು ಇಷ್ಟಪುಡುವುದಿಲ್ಲ. ಹಾಗಾಗಿ ನಿಮ್ಮ ಪರ್ಸ್‌ನಲ್ಲಿ ಇರುವ ಅನಗತ್ಯ ವಸ್ತುಗಳನ್ನು ತೆಗೆಯಿರಿ, ಪರ್ಸ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೀವು ನಿಮ್ಮ ಪರ್ಸ್ ಅನ್ನು ಶುಚಿಗೊಳಿಸಿ, ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ. ಇಲ್ಲವಾದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾದಿತು. ಆರ್ಥಿಕ ನಷ್ಟ ಉಂಟಾಗಬಹುದು. ಅಲ್ಲದೆ, ನಿಮ್ಮ ಕೈಯಲ್ಲಿ ಹಣ ಉಳಿಯದೇ, ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ.

ನಕಲಿ ನಾಣ್ಯ :

ವಾಸ್ತು ಶಾಸ್ತ್ರದ ಪ್ರಕಾರ, ನಕಲಿ ನಾಣ್ಯವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ಇದು ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ನಕಲಿ ನಾಣ್ಯವನ್ನು ಪರ್ಸ್ ನಲ್ಲಿ ಇಡಬೇಡಿ. ನೀವು ಈ ನಕಲಿ ನಾಣ್ಯ ಅಥವಾ ನೋಟ್ ಅನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟಿದ್ದರೆ ಮೊದಲು ಅದನ್ನು ಹೊರಹಾಕಿ. ಇದು ವ್ಯಕ್ತಿಯ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಮತ್ತೆ ವ್ಯಥೆ ಪಡುವ ಬದಲು ಮೊದಲೇ ಈ ನಕಲಿ ನಾಣ್ಯ ವನ್ನು ದೂರವಿರಿಸುವುದು ಉತ್ತಮ.

ಹರಿದ ನೋಟು:

ಕೆಲವರ ಪರ್ಸ್ ನಲ್ಲಿ ನೆನಪಿದ್ದೋ ಇಲ್ಲದೆಯೋ ಒಂದು ಮೂಲೆಯಲ್ಲಿ ಬಳಕೆಗೆ ಬಾರದ ಹರಿದು ನೋಟು ಇರುತ್ತದೆ. ಆದರೆ ಅದರ ಗೋಜಿಗೆ ಹೋಗಿರಲ್ಲ. ಇನ್ನು ಕೆಲವರಿಗೆ ನೋಟು ಹರಿದಿದ್ದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ತಿಳಿದಿದ್ದರೂ ಕೂಡ ಅದನ್ನು ಪರ್ಸ್‌ನಲ್ಲಿ ಇಡುವ ಅಭ್ಯಾಸವಿರುತ್ತದೆ. ಆದರೆ, ಇದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳಬಹುದು. ವಾಸ್ತು ಪ್ರಕಾರ, ಹೀಗೆ ಮಾಡುವುದು ಒಳ್ಳೆಯದಲ್ಲ. ನೀವು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಿಲುಕಬಹುದು. ಅಲ್ಲದೆ ನೆಗೆಟಿವ್ ಎನರ್ಜಿ ಮನೆಯೊಳಗೆ ಸೇರುತ್ತದೆ ಎಂದು ಹೇಳಲಾಗುತ್ತದೆ.

ಫೋಟೋಗಳು :

ಇಷ್ಟವಾಗಿದ್ದ ವ್ಯಕ್ತಿ ಸತ್ತರೆ ನಂತರ ಅವರ ನೆನಪಿಗೆ ಅವರ ಫೋಟೋವನ್ನು ಸದಾ ಜೊತೆಯಾಗಿರುವ ಪರ್ಸ್ ನಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ ಹೀಗೆ ಮಾಡುವುದು ವಾಸ್ತು ಪ್ರಕಾರ ತಪ್ಪು. ಪರ್ಸ್ ಅನ್ನು ಲಕ್ಷ್ಮಿ ದೇವಿಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಸತ್ತ ವ್ಯಕ್ತಿಯ ಚಿತ್ರವನ್ನು ಪರ್ಸ್‌ನಲ್ಲಿ ಇಡುವುದು ಅಶುಭ. ಹಾಗಾಗಿ ಸತ್ತ ವ್ಯಕ್ತಿಯ ಫೋಟೋ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡಿದ್ದರೆ, ಅದನ್ನು ತಕ್ಷಣ ತೆಗೆದು ಬಿಡಿ.

Leave A Reply

Your email address will not be published.