SBI Recruitment 2022 : ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ !!!

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಹುಡುಕೋ ಪ್ರತಿಯೊಬ್ಬರಿಗೂ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ದೇಶದ ಪ್ರತಿಷ್ಠಿತ ಬ್ಯಾಂಕ್​ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವು ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಎಸ್ ಬಿಐ ಖಾಲಿ ಇರುವ ಮ್ಯಾನೇಜರ್​ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.

ಆಸಕ್ತಿವುಳ್ಳ, ಅರ್ಹ ಅಭ್ಯರ್ಥಿಗಳು ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ತಿಂಗಳು 12ನೇ ತಾರೀಖಿನೊಳಗೆ ಆನ್​ ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆ: ಮ್ಯಾನೇಜರ್​
ಹುದ್ದೆಗಳ ಸಂಖ್ಯೆ: 60
ವಯೋಮಿತಿ: 25ರಿಂದ 35 ವರ್ಷ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12-12-2022

ಹುದ್ದೆಗಳ ವಿವರ :
ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) — 55 ಹುದ್ದೆಗಳು
ಮ್ಯಾನೇಜರ್ (ಪ್ರಾಜೆಕ್ಟ್​ ಡಿಜಿಟಲ್ ಪಾವತಿಗಳು) – 5
ಮ್ಯಾನೇಜರ್​ (ಪ್ರಾಡೆಕ್ಟ್​ ಡಿಜಿಟಲ್ ಪ್ಲಾಟ್‌ ಫಾರ್ಮ್‌ಗಳು) – 2
ಮ್ಯಾನೇಜರ್​ ( ಪ್ರಾಡೆಕ್ಟ್​ ಡಿಜಿಟಲ್ ಪಾವತಿಗಳು ) – 2

ವಿದ್ಯಾರ್ಹತೆ : MBA/ MMS (ಹಣಕಾಸು)/ PGDBA/ PGDBM/ CA/ CFA/ ICWA ಪದವಿ ಹೊಂದಿರಬೇಕು

ವಯೋಮಿತಿ : ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಅವಕಾಶವಿದೆ.

ಅರ್ಜಿ ಸಲ್ಲಿಕೆ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು : 750 ರೂ, SC/ST ಅಭ್ಯರ್ಥಿಗಳು: ಶುಲ್ಕ ಇಲ್ಲ

ಅಭ್ಯರ್ಥಿಗಳೇ ಗಮನಿಸಿ : ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಓದಿರಿ. ನಂತರ ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.