ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ | ಮಂಗಳೂರಿನ ಡಿವೈಎಸ್ಪಿ ಸೇರಿದಂತೆ ಕರ್ನಾಟಕದ 18 ಮಂದಿಗೆ ಅವಾರ್ಡ್
ನವದೆಹಲಿ: ಸ್ವಾತಂತ್ರ್ಯೋತ್ಸವದ ನಿಮಿತ್ತ ಪೊಲೀಸ್ ಇಲಾಖೆಗೆ ಪ್ರತಿವರ್ಷ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಈ ಬಾರಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಾರಿ ದೇಶದ ಒಟ್ಟು 347 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 87 ಮಂದಿ ರಾಷ್ಟ್ರಪತಿಗಳ ಪದಕಕ್ಕೆ ಅರ್ಹರಾಗಿದ್ದಾರೆ.ಮೆರಿಟೋರಿಸ್ ಪ್ರಶಸ್ತಿಗೆ ಕರ್ನಾಟಕದ 18 ಮಂದಿ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಅರ್ಹರಾಗಿದ್ದಾರೆ.
ಒಟ್ಟು 648 ಮಂದಿಯ ಸೇವೆಗೆ ಪ್ರಶಂಸನೀಯ ಪ್ರಶಸ್ತಿ ಲಭಿಸಿದ್ದು, ಮೆರಿಟೋರಿಸ್ ಪ್ರಶಸ್ತಿಗೆ ಅರ್ಹರಾದ ಕರ್ನಾಟಕದ ಪೊಲೀಸ್ ಅಧಿಕಾರಿಗಳ ಪಟ್ಟಿ ಇಲ್ಲಿದೆ ನೋಡಿ.
1.ನಂಜಪ್ಪ ಶ್ರೀನಿವಾಸ್, ಎಸ್ಪಿ, ಪಿಟಿಎಸ್, ಕಡೂರು
2.ಪ್ರತಾಪ್ ಸಿಂಗ್ ತೋರಾಟ್, ಡಿವೈಎಸ್ಪಿ, ಮಂಗಳೂರು
3.ಟಿಎಂ ಶಿವಕುಮಾರ್, ಡಿವೈಎಸ್ಪಿ, ಬೆಂಗಳೂರು
4.ಝಕೀರ್ ಇನಾಮ್ದಾರ್, ಡಿವೈಎಸ್ಪಿ, ಕಲಬುರ್ಗಿ ನಗರ
5.ಶ್ರೀನಿವಾಸ್ ರೆಡ್ಡಿ, ಡಿವೈಎಸ್ಪಿ, ಸಿಐಡಿ ಅರಣ್ಯ ಘಟಕ, ಬೆಂಗಳೂರು
- ನರಸಿಂಹಮೂರ್ತಿ, ಡಿವೈಎಸ್ಪಿ, ಸಿಐಡಿ, ಬೆಂಗಳೂರು
7.ಪ್ರಕಾಶ್ ಆರ್, ಡಿವೈಎಸ್ಪಿ, ಎಸಿಬಿ, ಬೆಂಗಳೂರು
8.ರಾಘವೇಂದ್ರ ರಾವ್ ಶಿಂಧೆ, ಎಸಿಪಿ, ಎಫ್ಪಿಬಿ, ಬೆಂಗಳೂರು
9.ರಾಜಾ ಚಿಕ್ಕಹನುಮೇಗೌಡ, ಇನ್ಸ್ಪೆಕ್ಟರ್, ಮೈಸೂರು ನಗರ
10.ಧ್ರುವರಾಜ್ ಪಾಟೀಲ್, ಸಿಪಿಐ, ವಿಜಯಪುರ ರೈಲ್ವೇ ಪೊಲೀಸ್
11.ಮೊಹಮ್ಮದ್ ಆಲಿ, ಇನ್ಸ್ಪೆಕ್ಟರ್, ಎಸಿಬಿ, ಬೆಂಗಳೂರು
12.ರವಿ ಸಣ್ಣೇಗೌಡ, ಸಿಪಿಐ, ಶೃಂಗೇರಿ ಪೊಲೀಸ್ ಠಾಣೆ - ಮುಫೀದ್ ಖಾನ್, ಇನ್ಸ್ಪೆಕ್ಟರ್, ಕೆಎಸ್ಆರ್ಪಿ
14.ಮುರಳಿ ರಾಮಕೃಷ್ಣಪ್ಪ, Special ARSI, ಬೆಂಗಳೂರು
15.ಮಹಾದೇವಯ್ಯ, ARSI, ಬೆಂಗಳೂರು
16.ಧರ್ಮರಾಜ್ ಬಾಲಕೃಷ್ಣ ಶಿಂಧೆ, ಎಎಸ್, ಬೆಳಗಾವಿ
17.ರಂಜಿತ್ ಧೆಟ್ಟಿ, ಎಎಸ್ಐ, ಬೆಂಗಳೂರು
18.ಬಸವರಾಜ ಬಿ. ಅಂಡೆಮ್ಮನವರ್, Special ARSI, ಬೆಂಗಳೂರು