

ಅನ್ಯ ಕೋಮಿನ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಪತ್ತೆಯಾಗಿದ್ದು,ಬಜರಂಗದಳ ಕಾರ್ಯಕರ್ತರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಜೋಡಿಯನ್ನು ವಿಚಾರಣೆ ನಡೆಸಿದ ಘಟನೆಯು ಜೂನ್ 10ರ ರಾತ್ರಿ ಪುತ್ತೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಹಿಂದೂ ಯುವತಿಯು, ಪುತ್ತೂರಿನ ಬನ್ನೂರು ನಿವಾಸಿ ಅನ್ಯಮತೀಯ ಯುವಕನೊಂದಿಗೆ ರೈಲ್ವೇ ನಿಲ್ದಾಣದಲ್ಲಿ ನಿಂತಿರುವುದು ಕಂಡುಬಂದಿತ್ತು. ಕೂಡಲೇ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ವಿಚಾರಿಸಿದಾಗ ಯುವತಿಯು ಯುವಕನ ಸಂಬಂಧಿಯೊಬ್ಬರ ವಿವಾಹ ಕಾರ್ಯಕ್ಕೆ ಬೆಂಗಳೂರಿನಿಂದ ಬಂದಿದ್ದಳು ಎಂದು ತಿಳಿದು ಬಂದಿದೆ.
ಹೀಗೆ ಪುತ್ತೂರಿಗೆ ಬಂದ ಆಕೆ ಯುವಕನ ಮನೆಯಲ್ಲೇ ಆಶ್ರಯ ಪಡೆದು, ಮದುವೆಯ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ತೆರಳಲು ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.













