Home ಬೆಂಗಳೂರು ಹೆತ್ತವರಿಗೆ ಮೆಸೇಜ್ ಮಾಡಿ ಮನೆಬಿಟ್ಟ ಅಪ್ರಾಪ್ತ ಬಾಲಕಿಯರು!! ಬಾಲಕಿಯರು ಬೆಂಗಳೂರು ಬಸ್ಸು ಹತ್ತುವುದರ ಹಿಂದಿತ್ತು ಸವಾಲಿನ...

ಹೆತ್ತವರಿಗೆ ಮೆಸೇಜ್ ಮಾಡಿ ಮನೆಬಿಟ್ಟ ಅಪ್ರಾಪ್ತ ಬಾಲಕಿಯರು!! ಬಾಲಕಿಯರು ಬೆಂಗಳೂರು ಬಸ್ಸು ಹತ್ತುವುದರ ಹಿಂದಿತ್ತು ಸವಾಲಿನ ಕಾರಣ!!

Hindu neighbor gifts plot of land

Hindu neighbour gifts land to Muslim journalist

ಏನಾದರೊಂದು ಸಾಧನೆ ಮಾಡಿ ಬರುತ್ತೇವೆ ಎಂದು ಮನೆಬಿಟ್ಟು ಹೊರಟು ಬಂದಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಪೋಷಕರ ಜೊತೆ ಕಳುಹಿಸಿದ ಘಟನೆಯೊಂದು ವರದಿಯಾಗಿದೆ.

ಮೂಲತಃ ಬಳ್ಳಾರಿಯವರಾದ ಸುಮಾರು ಆರರಿಂದ ಹನ್ನೆರಡು ವರ್ಷ ಪ್ರಾಯದ ನಾಲ್ಕು ಮಂದಿ ಅಪ್ರಾಪ್ತ ಬಾಲಕಿಯರು ಟಿ.ವಿ ಯಲ್ಲಿ ಬರುವ ರಿಯಾಲಿಟಿ ಶೋ ಒಂದನ್ನು ವೀಕ್ಷಿಸಿ, ತಾವು ಕೂಡ ಏನಾದರೊಂದು ಸಾಧನೆ ಮಾಡಬೇಕೆಂದು ಬಯಸಿದ್ದರು.

ಅದರಂತೆ ತಮ್ಮ ಪೋಷಕರ ಮೊಬೈಲ್ ವಾಟ್ಸಪ್ ಗೆ ನಾವು ಸಾಧನೆ ಮಾಡಿ ಬರುತ್ತೇವೆಂದು ವಾಯ್ಸ್ ಮೆಸೇಜ್ ಮಾಡಿ ಮನೆ ಬಿಟ್ಟಿದ್ದರು. ಅತ್ತ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದು, ದೂರು ದಾಖಲಾದ ಕೂಡಲೇ ಬಾಲಕಿಯರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದರು.

ಇತ್ತ ಬಸ್ಸಿನಲ್ಲಿದ್ದ ಬಾಲಕಿಯರನ್ನು ಗಮನಿಸಿದ ಚಾಲಕ ಮತ್ತು ನಿರ್ವಾಹಕ ವಿಚಾರಿಸಿದ್ದು,ಮನೆ ಬಿಟ್ಟು ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರ ಗಮನಕ್ಕೆ ತಂದು, ಪೋಷಕರು ಠಾಣೆಗೆ ಬಂದ ನಂತರ ಮರಳಿ ಮಡಿಲು ಸೇರಿದ್ದಾರೆ.