ಸತತ ಎರಡು ಸೋಲಿನ ಬಳಿಕ ಗೆಲುವು ಕಂಡ SRH ಕ್ರಿಕೆಟ್ ತಂಡದಿಂದ ಸಖತ್ ಡ್ಯಾನ್ಸ್!!!

Share the Article

ಎರಡು ಸೋಲಿನ ಬಳಿಕ ಎರಡು ಗೆಲುವು ಕಂಡ ಸನ್‌ರೈಸರ್ ಹೈದರಾಬಾದ್ ಕ್ರಿಕೆಟಿಗರ ಸಂಭ್ರಮ “ಅರೇಬಿಕ್ ಕುತ್ತು’ ಹಾಡಿನ ಡ್ಯಾನ್ಸ್ ಮೂಲಕ ವೈರಲ್ ಆಗಿದೆ.

ಇತ್ತೀಚೆಗೆ ತೆರೆ ಕಂಡ ವಿಜಯ್-ಪೂಜಾ ಹೆಗ್ಡೆ ಜೋಡಿಯ ತಮಿಳು ಚಿತ್ರ “ಬೀಸ್ಟ್’ನ ಹಾಡು ಇದಾಗಿದೆ.

ಈ ಹಾಡಿಗೆ ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮ, ಪ್ರಿಯಂ ಗರ್ಗ್, ಸೌರಭ್ ದುಬೆ ಆವರೆಲ್ಲ ಸಖತ್ ಸ್ಟೆಪ್ ಹಾಕಿ ಕುಣಿದಿದ್ದಾರೆ.

ಇದರ ವೀಡಿಯೋವನ್ನು ಸನ್‌ರೈಸರ್ ಹೈದರಾಬಾದ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

Leave A Reply