Home ದಕ್ಷಿಣ ಕನ್ನಡ ಸುಳ್ಯ ತಾಲೂಕನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣದ ಆರೋಪಿಗಳ ಬಂಧನ!! ಘಟನೆ ನಡೆದು ಹತ್ತು ದಿನದಲ್ಲಿ ಅಂತಾರಾಜ್ಯ...

ಸುಳ್ಯ ತಾಲೂಕನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣದ ಆರೋಪಿಗಳ ಬಂಧನ!! ಘಟನೆ ನಡೆದು ಹತ್ತು ದಿನದಲ್ಲಿ ಅಂತಾರಾಜ್ಯ ಗ್ಯಾಂಗ್ ಪೊಲೀಸರ ಬಲೆಗೆ

Hindu neighbor gifts plot of land

Hindu neighbour gifts land to Muslim journalist

ಸುಳ್ಯ ತಾಲೂಕಿನ ಸಂಪಾಜೆ ಬಳಿ ಹತ್ತು ದಿನಗಳ ಹಿಂದೆ ರಾತ್ರಿ ವೇಳೆ ಮನೆಯೊಂದಕ್ಕೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅಲ್ಲಿದವರನ್ನು ಬೆದರಿಸಿ ಚಿನ್ನ ಹಾಗೂ ನಗದನ್ನು ದೋಚಿದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ತನಿಖೆ ನಡೆಸಿದ ಸುಳ್ಯ ಪೊಲೀಸರ ತಂಡವು 4 ಮಂದಿ ದರೋಡೆಕೋರರರನ್ನು ಬಂಧಿಸಿ, ಅವರ ಬಳಿಯಿಂದ ಒಂದು ಲಕ್ಷ 20 ಸಾವಿರ ರೂಪಾಯಿ ನಗದು ಹಾಗು ಕೃತ್ಯಕ್ಕೆ ಬಳಸಿದ ವಾಹನ, ಮೊಬೈಲ್ ವಶ ಪಡೆದಿದ್ದಾರೆ.

ಮುಸುಕುಧಾರಿಗಳ ದರೋಡೆಕೋರರ ತಂಡವೊಂದು
ಜ್ಯೋತಿಷ್ಯ ಹಾಗೂ ಪೌರೋಹಿತ್ಯ ವೃತ್ತಿ ಮಾಡುವ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಚಟ್ಟೆಕಲ್ಲು ನಿವಾಸಿ ಅಂಬರೀಶ್ ಎಂಬವರ ಮನೆಗೆ ಮಾ.21 ರಂದು ರಾತ್ರಿ ಮಾರಕಾಯುಧಗಳೊಂದಿಗೆ ನುಗ್ಗಿತ್ತು.

ಬಂಧಿತ ಆರೋಪಿಗಳ ಪೈಕಿ ಇಬ್ಬರು ತಮಿಳುನಾಡು ರಾಜ್ಯದವರಾದರೇ, ಇನ್ನಿಬ್ಬರು ಕರ್ನಾಟಕದ ಹಾಸನ ಜಿಲ್ಲೆಗೆ ಸೇರಿದವರು.

ತಮಿಳು ನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣೂರು ತಾಲೂಕಿನ ಕಾರ್ತಿಕ್ ಟಿ(38 ವರ್ಷ), ಹಾಸನದ ಚಿಕ್ಕಬುವನಹಳ್ಳಿ ಹೋಬಳಿಯ ಮಧುಕುಮಾರ್ (33 ವರ್ಷ,) ಹಾಸನದ ವಿದ್ಯಾನಗರ ನಿವಾಸಿ ದೀಕ್ಷಿತ್ ಕೆ.ಎನ್ (26 ವರ್ಷ) ಹಾಗೂ ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಬಿ. ನರಸಿಂಹನ್ (40 ವರ್ಷ) ಬಂಧಿತರು.