Pm Modi: PM ಮೋದಿ ಬಗ್ಗೆ ಅವಹೇಳನದ ವಿಡಿಯೋ ಮಾಡಿದ ಮೂವರು ಅರೆಸ್ಟ್

Pm Modi: ದೇಶದ ಪ್ರಧಾನಿ ಮೋದಿ (Pm Modi) ಬಗ್ಗೆ ಅವಹೇಳನಕಾರಿಯಾಗಿ ವೀಡಿಯೋ ಮಾಡಿದ್ದ ಕೊಡಗಿನ (Kodagu) ಮೂವರು ಕಿಡಿಗೇಡಿಗಳು ಅಂದರ್ ಆಗಿದ್ದಾರೆ.ಮಡಿಕೇರಿಯಲ್ಲಿ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಫಾಹಾದ್, ಬಾಸಿಲ್, ಹಾಗು ಸಮೀರ್ ಎಂದು ತಿಳಿದು ಬಂದಿದೆ. ಸೆಲ್ಫಿ ವಿಡಿಯೋ ಮಾಡಿ ಮೋದಿಗೆ ಅವಮಾನ ಆಗುವ ಮಾತುಗಳನ್ನು ಮೂವರು ಆಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ನಿಗಾವಹಿಸಿ ಮೂವರನ್ನು ಬಂಧಿಸಿದ್ದಾರೆ.ಮಡಿಕೇರಿಯ ಸ್ಪೈಸಸ್ ಅಂಗಡಿಯಲ್ಲಿ ಕುಳಿತು ಆರೋಪಿಗಳು ವಿಡಿಯೋ ಮಾಡಿದ್ದರು ಅವಾಚ್ಯ ಪದಗಳಿಂದ ಪ್ರಧಾನಿ ನರೇಂದ್ರ ಮೋದಿಯನ್ನು ಆರೋಪಿಗಳು ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೂವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಈ ಕುರಿತು ಮಡಿಕೇರಿ ನಗರ ಠಾಣೆಗೆ ಕೊಡಗು ಜಿಲ್ಲಾ ಬಿಜೆಪಿ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಪಿ ಎಂ ಮೋದಿಯವರ ಕಾರ್ಯವೈಖರಿ ಬಗ್ಗೆ ಮೂವರು ಟೀಕಿಸಿದ್ದಾರೆ. ಅಲ್ಲದೆ ಪ್ರಧಾನಿ ಹುದ್ದೆಯ ಘನತೆಗೆ ಧಕ್ಕೆತಂದಿದ್ದಾರೆ.

Comments are closed.