Mangalore: ಪಣಂಬೂರು:ಯುವಕನ ಕೊಲೆ: ಆರೋಪಿ ಬಂಧನ!

Share the Article

Mangalore: ಮದ್ಯ ಸೇವನೆಗೆ ಹಣ ನೀಡಿಲ್ಲ ಎಂದು ಜಗಳವಾಡಿರುವುದಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ರವಿವಾರ ತಡರಾತ್ರಿ ಬೈಕಂಪಾಡಿಯಲ್ಲಿ ನಡೆದಿದ್ದು, ಕೊಲೆ ಆರೋಪಿಯನ್ನು ಬಂಧಿಸಲಾಗಿದೆ.

ಕೊಲೆಯಾದವರನ್ನು ಉತ್ತರ ಪ್ರದೇಶ ಮೂಲದ ನಿವಾಸಿ, ಸದ್ಯ ಬೈಕಂಪಾಡಿಯಲ್ಲಿ ವಾಸವಿರುವ ಸಚಿನ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ, ಪ್ರಸಕ್ತ ಬೈಕಂಪಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರವೀಣ್ ಶಿವಶಂಕರಪ್ಪ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.ಸಚಿನ್ ಕುಮಾರ್ ಮತ್ತು ಪ್ರವೀಣ್ ಶಿವಶಂಕರಪ್ಪ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು.

Comments are closed.