ಕಡಬ: ವಿವಾಹಿತ ಮಹಿಳೆ ನಾಪತ್ತೆ, ಪ್ರಕರಣ ದಾಖಲು

Share the Article

ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಸುಪ್ರೀತ್‌ ಕುಮಾರ್‌ ಜಿ (34) ಅವರ ಪತ್ನಿ ಕವಿತಾ (27) ಕಾಣೆಯಾದ ಕುರಿತು ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಕವಿತಾ ಅವರು ತಮ್ಮ ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ನ್ಯಾಯ ತರ್ಪು ಗ್ರಾಮದ ಗೋವಿಂದೂರು ಮನೆಗೆ ಹೋಗಿ ಶುಕ್ರವಾರ ಮರಳುವುದಾಗಿ ಪತಿಗೆ ತಿಳಿಸಿದ್ದರು. ಆದರೆ 03.12.2025 ರಂದು ಬೆಳಿಗ್ಗೆ 07.15 ಕ್ಕೆ ಪತಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಯಾರಿಗೂ ತಿಳಿಯದಂತೆ ಹೊರಗೆ ಹೋಗಿದ್ದು, ಸಂಜೆವರೆಗೂ ಮರಳಿ ಬರಲಿಲ್ಲ.

ಪತ್ನಿ ತಾಯಿ ಮನೆಗೆ ಹೀಗಿರಬಹುದು ಎಂದು ಪತಿ ಎಣಿಸಿದ್ದು, ನಂತರ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದು ಅಲ್ಲಿ ಕವಿತಾ ಹೋಗಿಲ್ಲವೆಂದು ತಿಳಿದು ಬಂದಿದೆ. ನಂತರ ನೆರೆಹೊರೆಯವರು ಹಾಗೂ ಬಂಧು ಮಿತ್ರರಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಇರುವುದರಿಂದ ಸುಪ್ರೀತ್‌ ಕುಮಾರ್‌ ಅವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

Comments are closed.