The Devil: ‘ದಿ ಡೆವಿಲ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್!

Share the Article

The Devil: ಚಾಲೆಂಜಿಂಗ್ ಸ್ಟಾರ್ ದರ್ಶನ್ (Drshan) ಅಭಿನಯದ ‘ಡೆವಿಲ್’ ಸಿನಿಮಾ (Devil Cinema) ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ಈ ಸಿನಿಮಾದ ಟ್ರೈಲರ್ (Devil Trailer) ರಿಲೀಸ್‌ಗೆ ದಿನಾಂಕ ನಿಗದಿಯಾಗಿದೆ.

ಇದೇ ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದೆ. ಇದರ ಅನೌನ್ಸ್ಮೆಂಟ್ ವಿಭಿನ್ನವಾಗಿ ಮಾಡಿದೆ ಚಿತ್ರತಂಡ. ದರ್ಶನ್ ಅವರ ಧ್ವನಿಯಲ್ಲಿ ʼನಾನ್‌ ಬರ್ತಿದ್ದೀನಿ ಚಿನ್ನʼ ಅಂತ ಟ್ರೈಲರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಿರೋದು ದರ್ಶನ್ ಫ್ಯಾನ್ಸ್‌ಗೆ ಮತ್ತಷ್ಟು ಖುಷಿಕೊಟ್ಟಿದೆ.ಈಗಾಗಲೇ ಡೆವಿಲ್ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿದ್ದು, ಟ್ರೈಲರ್‌ಗಾಗಿ ದರ್ಶನ್ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

Comments are closed.