MUMBAI: ಕಾಳಿ ಮಾತೆಗೆ ಮದರ್ ಮೇರಿ ವೇಷ ಹಾಕಿದ ಅರ್ಚಕ!

MUMBAI: ಮುಂಬೈನ (Mumbai) ಚೆಂಬೂರ್ (Chembur) ಪ್ರದೇಶದ ವಾಶಿ ನಾಕಾದಲ್ಲಿರುವ ಕಾಳಿ ಮಾತಾ ದೇವಾಲಯದ (Kali Temple) ಅರ್ಚಕನೊಬ್ಬ ತನ್ನ ಕನಸಲ್ಲಿ ದೇವಿ ಬಂದಿದ್ದಳು ಎಂದು ಹೇಳಿ ಕಾಳಿ ಮಾತೆಗೆ ಮದರ್ ಮೇರಿಯ ವೇಷ ಹಾಕಿದ ಘಟನೆ ನಡೆದಿದೆ.

ಇದೀಗ ವಿವಾದ ಹುಟ್ಟಿಸಿದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.ವರದಿಗಳ ಪ್ರಕಾರ ಭಾನುವಾರ ವಾಶಿ ನಾಕಾದಲ್ಲಿರುವ ಕಾಳಿ ಮಾತಾ ದೇವಾಲಯಕ್ಕೆ ಬಂದ ಭಕ್ತರು ಗರ್ಭಗುಡಿಯಲ್ಲಿ ಕಾಳಿ ದೇವಿಯ ವಿಗ್ರಹ ಕಂಡು ತಬ್ಬಿಬ್ಬಾಗಿದ್ದಾರೆ. ಕಾಳಿ ವಿಗ್ರಹಕ್ಕೆ ಮದರ್ ಮೇರಿಯ ವೇಷ ಹಾಕಿದ್ದಾನೆ. ಇದು ಭಕ್ತರಲ್ಲಿ ಗೊಂದಲ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.ಕೆಲ ಭಕ್ತರು ದೇವಿಯ ನೋಟ ಹೀಗೇಕೆ ಬದಲಾಗಿದೆ ಎಂದು ನೇರವಾಗಿ ದೇವಾಲಯದ ಅರ್ಚಕನನ್ನು ಪ್ರಶ್ನಿಸಿದ್ದಾರೆ. ಆಗ ಆತ, ದೇವಿ ನನ್ನ ಕನಸಲ್ಲಿ ಕಾಣಿಸಿಕೊಂಡಿದ್ದಳು. ಆದರೆ ಆಕೆ ಮದರ್ ಮೇರಿಯ ರೂಪದಲ್ಲಿದ್ದಳು. ಆಕೆಯನ್ನು ಅದೇ ರೂಪದಲ್ಲಿ ಅಲಂಕರಿಸಲು ಸೂಚಿಸಿದ್ದಳು. ಹೀಗಾಗಿ ನಾನು ವಿಗ್ರಹವನ್ನು ಹೀಗೆ ಅಲಂಕರಿಸಿದೆ ಎಂದು ತಿಳಿಸಿದ್ದಾನೆ.
Comments are closed.