Puttur: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ‘ಪಿಎಂಶ್ರೀ ಸಡಗರ’ಮೆರುಗು ನೀಡಿದ ವಾರ್ಷಿಕೋತ್ಸವ ಸಂಭ್ರಮ

Share the Article

Puttur: ಪುತ್ತೂರಿನ ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ‘ಪಿಎಂಶ್ರೀ ಸಡಗರ’ ಮೆರುಗು ನೀಡಿದ ವಾರ್ಷಿಕೋತ್ಸವ ಸಂಭ್ರಮ ಅದ್ದೂರಿ ಯಾಗಿ ನಡೆಯಿತು.ಕಾರ್ಯಕ್ರಮ ಅಂಗವಾಗಿ:* ಮಕ್ಕಳ ವಾರ್ಷಿಕ ಕ್ರೀಡಾಕೂಟ* ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ* ಮಕ್ಕಳ ಬ್ಯಾಂಡ್ ಘೋಷ್ * ಕರಾಟೆ ಪ್ರದರ್ಶನ* ಯೋಗ ಪ್ರದರ್ಶನ* ಭರತನಾಟ್ಯ* ಯಕ್ಷಗಾನ* ರಂಗಗೀತೆಗಳು* ಪಾಠ ನಾಟಕಗಳು* ಜನಪದ ಕುಣಿತಗಳು* ನೃತ್ಯಗಳನ್ನು ನಡೆಸಲಾಯಿತು.ಮಕ್ಕಳ ಸೃಜನಶೀಲ ಅಭಿವ್ಯಕ್ತಿ ಕಾರಣವಾದ ಶಾಲಾ ವಾರ್ಷಿಕೋತ್ಸವವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಇವರು ಧ್ವಜಾರೋಹಣಗೈದು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ವಸಂತಿ, ಪದ್ಮಾವತಿ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದಾಮೋದರ ಕುಲಾಲ್ ಉಪಸ್ಥಿತರಿದ್ದರು. ಶಾಲೆಗೆ ಚಯರ್ ಕೊಡುಗೆ ನೀಡಿದ ದಾಮೋದರ್ ಕುಲಾಲ್ ಇವರನ್ನು ಗೌರವಿಸಲಾಯಿತು. *ಸಾಧಕರಿಗೆ ಸನ್ಮಾನ* ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಇವರು ಅತ್ಯುತ್ತಮ ಎಸ್ ಡಿ ಎಂ ಸಿ ಯೆಂದು ಪ್ರಶಸ್ತಿ ಪಡೆದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಇವರನ್ನು ಸನ್ಮಾನಿಸಿದರು. ಎಸ್ ಡಿ ಎಂ ಸಿಯ ಸರ್ವ ಸದಸ್ಯರನ್ನು ಗೌರವಿಸಿದರು. ಅತ್ಯುತ್ತಮ ಪಿಎಂಶ್ರೀ ಶಾಲೆಯೆಂದು ಪ್ರಶಸ್ತಿ ಪಡೆಯಲು ಕಾರಣರಾದ ಹಾಗೂ ಜಿಲ್ಲಾ ಅತ್ಯುತ್ತಮ ಮುಖ್ಯಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯಗುರು ತಾರಾನಾಥ ಪಿ ಇವರನ್ನು ಸನ್ಮಾನಿಸಿದರು.ಶಾಲೆಯ ಕೆಲಸ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ಮಾಡುತ್ತಿರುವ ಶಾಲಾ ಶಿಕ್ಷಕರನ್ನು, ಎಲ್ ಕೆ ಜೆ ಶಿಕ್ಷಕರನ್ನು, ಅಡುಗೆ ಸಿಬ್ಬಂದಿಗಳನ್ನು, ಪಿಎಂಶ್ರೀ ಯೋಜನೆಯ ಯೋಗ,ಕರಾಟೆ,ಕಂಪ್ಯೂಟರ್,ಇಂಗ್ಲಿಷ್ ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಿದರು.ಶಾಲೆಗೆ ವಿವಿಧ ರೀತಿಯ ದಾನ ಮಾಡಿದ ಮಹನೀಯರನ್ನು ಗೌರವಿಸಲಾಯಿತು. ಶಾಲಾ ಮುಖ್ಯಗುರು ತಾರಾನಾಥ ಪಿ ಇವರು ಸ್ವಾಗತಿಸಿದರು. ಶಿಕ್ಷಕಿಯರಾದ ಶೋಭಾ,ಕವಿತಾ ಹೇಮಾ,ಸವಿತಾ,ಸಂಚನಾ, ಬಹುಮಾನ ಪಟ್ಟಿ ವಾಚಿಸಿದರು. ಹರಿಣಾಕ್ಷಿ, ಕವಿತಾ, ಹಿಮತ್,ಚೈತ್ರಾ, ಕುಬ್ರಾ ಸಹಕರಿಸಿದರು. ಶ್ರೀಲತಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಎಸ್ ವೀರಮಂಗಲ, ಶಾಲಾ ಶಿಕ್ಷಕಿ ಶಿಲ್ಪರಾಣಿ, ಕಾರ್ಯಕ್ರಮ ನಿರೂಪಿಸಿದರು . ಶಿಕ್ಷಕಿ ಸೌಮ್ಯ ವಂದಿಸಿದರು. ಆ ಬಳಿಕ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

Comments are closed.