Gold Price : ಇನ್ನು 3 ತಿಂಗಳಲ್ಲಿ ಚಿನ್ನದ ದರ ಎಷ್ಟು ಏರಿಕೆ ಆಗುತ್ತೆ? ತಜ್ಞರು ಹೇಳೋದು ಕೇಳಿದ್ರೆ ಶಾಕ್ ಆಗುತ್ತೆ

Gold Price: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಚಿನ್ನದ ದರ ಎಷ್ಟೇ ಏರಿಕೆ ಕಂಡರೂ ಕೂಡ ಅದನ್ನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದರ ನಡುವೆ ಭವಿಷ್ಯದಲ್ಲಿ ಚಿನ್ನದ ದರ ಏನಾಗಬಹುದು ಎಂಬ ಚರ್ಚೆಗಳು ಕೂಡ ಹುಟ್ಟಿಕೊಂಡಿವೆ. ಹಾಗಾದರೆ ಇನ್ನು ಮೂರು ತಿಂಗಳಿನಲ್ಲಿ ಚಿನ್ನದ ದರ ಎಷ್ಟು ಏರಿಕೆ ಆಗುತ್ತೆ? ಇದನ್ನು ಕೇಳಿದರೆ ನಿಮಗೆ ಶಾಕ್ ಆಗಬಹುದು.

ಲಕ್ಷ್ಮಿ ಡೈಮಂಡ್ಸ್ ಸಂಸ್ಥೆಯ ಅಧ್ಯಕ್ಷ ಚೇತನ್ ಮೆಹ್ತಾ ಅವರ ಪ್ರಕಾರ, ಮುಂದಿನ 2-3 ತಿಂಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು 10%-20% ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ವರ್ಷ ಜನರು ಆಭರಣಗಳಿಗಿಂತ ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಹೆಚ್ಚು ಕೊಂಡಿದ್ದಾರೆ. ಹಾಗಿದ್ದರೂ, ಮದುವೆ ಸೀಸನ್ ಆರಂಭವಾಗುತ್ತಿರುವುದರಿಂದ ಆಭರಣಗಳ ಖರೀದಿ ಮತ್ತೆ ಚುರುಕಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
Comments are closed.