Madikeri: ಮಡಿಕೇರಿ: ಪತ್ನಿಗೆ ವೀಡಿಯೋ ಕಾಲ್ ಮಾಡಿ ಪತಿ ಲೈವ್ ಸೂಸೈಡ್!

Share the Article

Madikeri: ಮಡಿಕೇರಿ (Madikeri) ಸಮೀಪದ ಸಿಂಕೋನದಲ್ಲಿ ತನ್ನ ಪತ್ನಿಗೆ ವಿಡಿಯೋ ಕಾಲ್‌ ಮಾಡಿ ಲೈವ್‌ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಆತ್ಮಹತ್ಯೆ (Live Suicide) ಮಾಡಿಕೊಂಡ ವ್ಯಕ್ತಿ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೀರ್ತನ್‌ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ಆದ್ರೆ ಪತಿ ಜೈಲಿಗೆ ಹೋದ ಸಂದರ್ಭದಲ್ಲಿ ಪತ್ನಿ ಜ್ಯೋತಿ ತವರು ಮನೆ ಸೇರಿಕೊಂಡಿದ್ದರು. ಜೈಲಿಂದ (Jail) ರಿಲೀಸ್‌ ಆಗಿದ್ದ ಕೀರ್ತನ್‌ ನಿನ್ನೆ (ನ.15) ಸಂಜೆ ಪತ್ನಿಯನ್ನ ತನ್ನ ಮನೆಗೆ ಕರೆತರಲು ಹೋಗಿದ್ದಾನೆ. ಆದ್ರೆ ಪತ್ನಿ ಈತನ ಜೊತೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಪತಿ ನಿನ್ನೆ ಸಂಜೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇಂದು ಮೃತದೇಹ ಪತ್ತೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Madikeri Rural Police Station) ಪ್ರಕರಣ ದಾಖಲಾಗಿದೆ.

Comments are closed.