ಶಿವಮೊಗ್ಗ: ಪದವಿ ವಿದ್ಯಾರ್ಥಿನಿ ಆತ್ಮಹ*ತ್ಯೆ

Shivamogga: ಯುವತಿಯೊಬ್ಬಳು ಮನೆ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ಬಚ್ಚನಕೂಡಿಗೆಯಲ್ಲಿ ನಡೆದಿದೆ.

ಬಚ್ಚನಕುಡಿಗೆಯ ರಮೇಶ್ ಆಚಾರ್ ಅವರ ಪುತ್ರಿ ಪ್ರಾಪ್ತಿ (21) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ವರದಿಯಾಗಿದೆ.
ತೀರ್ಥಹಳ್ಳಿಯ ಬಾಳೆಬಯಲು ಸರಕಾರಿ ಪದವಿ ಕಾಲೇಜಿನ ತೃತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಈಕೆ, ಆತ್ಮಹತ್ಯೆ ಮಾಡಲು ಕಾರಣವೇನೆಂದು ತಿಳಿದು ಬಂದಿಲ್ಲ. ಈ ಕುರಿತು ಮಾಳೂರು ಪೊಲೀಸರು ಪರಿಶೀಲನೆ ಮಾಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Comments are closed.