Bengaluru: ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಉಪಾಯ; ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್

Bengaluru: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಸಮಸ್ಯೆಯನ್ನು (Traffic) ಬಗೆಹರಿಸಲು, ಸಂಸ್ಥೆಯೊಂದು ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್ (Metro Pass) ನೀಡಲು ಮುಂದಾಗಿದೆ.ಈ ಮೂಲಕ ಸ್ವಂತ ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಲು ಸೂಚಿಸಿದೆ. ಸಂಸ್ಥೆಯೊಂದು ತಮ್ಮ ಉದ್ಯೋಗಿಗಳಿಗೆ ಅದರಲ್ಲೂ ಆರ್.ವಿ ರೋಡ್ ಇಂದ ಬೊಮ್ಮಸಂದ್ರ ಮಾರ್ಗದಲ್ಲಿರುವ (ಯೆಲ್ಲೋ ಲೈನ್) ಸಂಸ್ಥೆ ಐಟಿಬಿಟಿ ಕಂಪೆನಿಗೆ ಕೆಲಸಕ್ಕೆ ಬರುವ ಉದ್ಯೋಗಿಗಳಿಗೆ ಸಂಚಾರ ಮಾಡಲು ಮೆಟ್ರೋ ಪಾಸ್ ವೊಂದು ನೀಡಿದ್ದು, ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಮುಂದಾಗಿದೆ. ಪ್ರಾಯೋಗಿಕ ಹಂತವಾಗಿ ಈಗಾಗಲೇ ಕೆಲವು ಕಂಪನಿಗಳ 250 ಉದ್ಯೋಗಿಗಳಿಗೆ ಸಿಎಸ್‌ಆರ್ ನಿಧಿಯಿಂದ ಆರ್ಬಿಟ್ ವಾಲೆಟ್ ರೂಪೇ ಕಾರ್ಡ್ ಮೂಲಕ ₹1,500 ಮೌಲ್ಯದ ಪಾಸ್‌ಗಳನ್ನು ವಿತರಿಸಲಾಗಿದೆ.ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ನೂರಾರು ಐಟಿ-ಬಿಟಿ ಕಂಪನಿಗಳಿದ್ದು, ಪ್ರತಿದಿನ ಲಕ್ಷಾಂತರ ಉದ್ಯೋಗಿಗಳು ತಮ್ಮ ಕಾರು, ಬೈಕ್ ಅಥವಾ ಕಂಪನಿ ಕ್ಯಾಬ್‌ಗಳಲ್ಲಿ ಸಂಚರಿಸುತ್ತಿರುವುದರಿಂದ ಸಿಲ್ಕ್ ಬೋರ್ಡ್ ಬಳಿ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಹಲವು ಬಾರಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಸಂಸ್ಥೆಗಳು ತಮ್ಮನೌಕರರಿಗೆ ಪ್ರತಿ ತಿಂಗಳು 1,500 ರೂ. ಪಾಸ್ ನೀಡುವ ಯೋಜನೆ ರೂಪಿಸಿದೆ. ಒಂದು ವೇಳೆ ಈ ಯೋಜನೆಯಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿ ಉತ್ತಮ ಆಯ್ಕೆ ಎಂದು ಅನ್ನಿಸಿದರೆ ಮುಂದಿನ ದಿನಗಳಲ್ಲಿ ಆ ಭಾಗದ ಹಲವು ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೆಟ್ರೋ ಪಾಸ್‌ಗಳನ್ನು ನೀಡುವ ಸಾಧ್ಯತೆಗಳಿರುತ್ತದೆ. ಇದರಿಂದ ಟೆಕ್ಕಿಗಳು ಸಮಯಕ್ಕೆ ಕಚೇರಿಗೆ ತಲುಪುವ ಸಾಧ್ಯತೆ ಹೆಚ್ಚುವುದರ ಜೊತೆಗೆ, ಟ್ರಾಫಿಕ್ ಒತ್ತಡವೂ ಕಡಿಮೆಯಾಗಲಿದೆ ಎಂದು ಐಟಿಬಿಟಿ ಅಸೋಸಿಯೇಷನ್ ವಕ್ತಾರ ಮಯೂರ್ ತಿಳಿಸಿದ್ದಾರೆ.

Comments are closed.