Smruthi Mandana : ವಿರಾಟ್ ಕೊಹ್ಲಿಯ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂದಾನ!!

Smruthi Mandana: ಮಹಿಳಾ ಕ್ರಿಕೆಟ್ ಲೋಕದಲ್ಲಿ ಭಾರತೀಯ ಆಟಗಾರ್ತಿಯಾದ ಸ್ಮೃತಿ ಮಂದಾನ ಅವರ ಹೆಸರು ನಕ್ಷತ್ರದ ರೀತಿ ಮಿನುಗುತ್ತಿದೆ. ಇದೀಗ ಈಕೆ ಕ್ರಿಕೆಟ್ನ ದುಬಾರಿಯಾಗಿರುವ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಹೌದು, ವಿಶಾಖಪಟ್ಟಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕಳಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ 80 ರನ್ ಬಾರಿಸಿ ಮಿಂಚಿದ್ದರು. ಈ 80 ರನ್ಗಳೊಂದಿಗೆ ಸ್ಮೃತಿ ಮಂಧಾನ ಏಕದಿನ ಕ್ರಿಕೆಟ್ನಲ್ಲಿ 5000 ರನ್ ಪೂರೈಸಿದ್ದಾರೆ. ಈ ದಾಖಲೆಯ ಮೂಲಕ ಸ್ಮೃತಿ, ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿದಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ 114 ಏಕದಿನ ಇನಿಂಗ್ಸ್ಗಳ ಮೂಲಕ 5000 ರನ್ ಪೂರೈಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 5 ಸಾವಿರ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸ್ಮೃತಿ ಮಂಧಾನ ಮುರಿದಿದ್ದಾರೆ. ಈ ಮೂಲಕ ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 5000 ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಸ್ಮೃತಿ ಮಂಧಾನ ಪಾಲಾಗಿದೆ.
Comments are closed.