Bengaluru : ಬೆಂಗಳೂರಿನ ಟ್ರಾಫಿಕ್ ನಿಂದ ಪರಾಗಲು ಹೊಸ ಆಪ್ ಬಿಡುಗಡೆ!!

Bengaluru : ಬೆಂಗಳೂರಿನ ಟ್ರಾಫಿಕ್ ಜಾಮ್ ಗೆ ಜನರು ಸೋತು ಸುಣ್ಣವಾಗಿದ್ದಾರೆ. ಎರಡು ಮೂರು ಕಿಲೋಮೀಟರ್ ಕ್ರಮಿಸಲು ಪರೋಬ್ಬರಿ ಒಂದರಿಂದ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು ಬೆಂಗಳೂರು ವಾಸಿಗರು ಹೈರಾಣ ಆಗಿದ್ದಾರೆ. ಇದೀಗ ಈ ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ಹೊಸ ಆಪ್ ಬಿಡುಗಡೆ ಆಗಿದೆ.

ಹೌದು, ಬೆಂಗಳೂರಲ್ಲಿ ಮುಂದೆ ಟ್ರಾಫಿಕ್ ಇರುತ್ತೋ ಇಲ್ಲವೋ ಎಂದು ಗೊತ್ತಿಲ್ಲದೆ ಬಂದು ರಸ್ತೆಗಳಲ್ಲಿ ಸಿಲುಕಿಕೊಳ್ಳುತ್ತಿದ್ದವರು ಇನ್ನು ಮುಂದೆ ಮುಂಜಾಗ್ರತೆ ವಹಿಸಿ, ನಿಮ್ಮ ರೂಟ್ ಚೇಂಜ್ ಮಾಡಬಹುದು. ಸಿಗ್ನಲ್ ಎಷ್ಟು ಹೊತ್ತಿಗೆ ಬಿಡುತ್ತೆ ಎಂದು ಮೊದಲೇ ತಿಳಿದುಕೊಳ್ಳಬಹುದು. ಇದಕ್ಕಾಗಿ ಹೊಸ ಆಪ್ ಒಂದು ಬಂದಿದೆ.
ಬೆಂಗಳೂರಿಗರ ಕೈಯಲ್ಲಿಯೇ ಇಂತಹ ಒಂದು ವ್ಯವಸ್ಥೆ ಸಿಗಲಿದ್ದು, ಇದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮ್ಯಾಪಲ್ಸ್ ಆಯಪ್ (Mappls app) ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್, ಕೌಂಟ್ಡೌನ್ನ ಲೈವ್ ಮಾಹಿತಿ ನೀಡಲಿದೆ. ನ್ಯಾವಿಗೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ನೈಜ-ಸಮಯದ ಸಿಗ್ನಲ್ ಸಮಯವನ್ನು ನೇರವಾಗಿ ಪ್ರದರ್ಶಿಸುವ ಭಾರತದ ಮೊದಲ ನಗರವಾಗಿ ಬೆಂಗಳೂರು ಸ್ಥಾನ ಪಡೆದಿದೆ. ಈ ಫೀಚರ್ ಪ್ರಯಾಣವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಚಾಲಕರು ಸಿಗ್ನಲ್ ಬದಲಾವಣೆಗಳನ್ನು ನಿರೀಕ್ಷಿಸಲು ಮತ್ತು ಅವರ ಚಲನೆಯನ್ನು ಪರಿಣಾಮಕಾರಿಯಾಗಿ ಯೋಜಿಸಲು ಸಹ ಅನುವು ಮಾಡಿಕೊಡುತ್ತದೆ.
ಸಂಚಾರ ದಟ್ಟಣೆ ಸುಧಾರಿಸಲು ಈ ಫೀಚರ್ ನೈಜ-ಸಮಯದ ಸಿಗ್ನಲ್ ಸಮಯಗಳ ಮಾಹಿತಿ ನೀಡಲಿದೆ. ಒಂದು ವೇಳೆ ಟ್ರಾಫಿಕ್ ಸಿಗ್ನಲ್ ಬಿಡುವುದು ತಡವಾದರೆ ಬೇರೆ ಮಾರ್ಗಗಳನ್ನು ಸವಾರರು ಆರಿಸಿಕೊಳ್ಳಬಹುದು. ಬೆಂಗಳೂರು ಸಂಚಾರ ಪೊಲೀಸ್ ಮತ್ತು ಅರ್ಕಾಡಿಸ್ ಇಂಡಿಯಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಮ್ಯಾಪಲ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಟ್ರಾಫಿಕ್ ಸಿಗ್ನಲ್ ಕೌಂಟ್‌ಡೌನ್‌ಗಳನ್ನು ಒಳಗೊಂಡಿರುವ ಭಾರತದ ಮೊದಲ ನಗರ ಬೆಂಗಳೂರು ಆಗಿದೆ. ಮುಂದಿನ ದಿನಗಳಲ್ಲಿ ಇತರ ಮಹಾನಗರಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ;Siddaramaiah: ಪ್ರಿಯಾಂಕ್ ಖರ್ಗೆ RSS ಬ್ಯಾನ್ ಪತ್ರ ಬೆನ್ನಲ್ಲೇ ಸಿಎಂ ಮಹತ್ವದ ಸೂಚನೆ
Comments are closed.