ಶಾರದಾತನಯ ರಾಮಕೃಷ್ಣ ರಾವ್ ಎರ್ಮಾಳು

Share the Article

ರಾಮಕೃಷ್ಣ ರಾವ್ ಎರ್ಮಾಳು ಅವರು ಎಂ.ಎ., ಬಿ.ಎಡ್. ಪದವಿಗಳನ್ನು ಪಡೆದ, ಶಿಕ್ಷಣ ಕ್ಷೇತ್ರದ ಉಜ್ವಲ ನಕ್ಷತ್ರ. ಕಾವ್ಯನಾಮ ‘ಶಾರದಾತನಯ’ ಎಂದು ಖ್ಯಾತರಾಗಿರುವ ಅವರು, ತಮ್ಮ ಜೀವನದ ಮೂವತ್ತೊಂಬತ್ತು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ನಿಷ್ಠೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಕರಾಗಿ ಅವರು ಕೇವಲ ಪಾಠ ಹೇಳಿದವರಲ್ಲ — ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸಿದ ನಿಜವಾದ ಮಾರ್ಗದರ್ಶಕ. ಸರ್ಕಾರಿ ಪ್ರಾಥಮಿಕ ಮತ್ತು ಪೌಢಶಾಲೆಗಳಲ್ಲಿ ಶಿಕ್ಷಕರಾಗಿ ಆರಂಭಿಸಿ, ನಂತರ ಕ್ಷೇತ್ರ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ವೃತ್ತಿನಿರತ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಅವರು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಅಳಿಯದ ಗುರುತು ಬಿಟ್ಟಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಅವರ ಸೇವೆ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಅವರ ಶ್ರಮ ಮತ್ತು ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳು  ಅವರ ಮುಡಿಗೇರಿವೆ— ಶಿಕ್ಷಣ ಕ್ಷೇತ್ರದಲ್ಲಿ ಹಿರಿಮೆಗೆ ಪುರಸ್ಕಾರ, ರಾಜ್ಯಮಟ್ಟದ ಕ್ರಿಯಾಸಂಶೋಧನೆಯಲ್ಲಿ ಪ್ರಥಮ ಸ್ಥಾನ, ಶಿಕ್ಷಕರಿಗಾಗಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಸ್ಥಾನ, ಹಾಗೂ ಉತ್ತಮ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿ – ಇವುಗಳು ಅವರ ಸಾಧನೆಯ  ಮೈಲಿಗಲ್ಲುಗಳು.

ಇದನ್ನೂ ಓದಿ:Davanagere: ಶ್ರೀರಾಮ, ಚಾಮುಂಡೇಶ್ವರಿ ಫ್ಲೆಕ್ಸ್‌ ವಿರೂಪ: ಐವರ ಬಂಧನ

ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮೇಲಿನ ಆಸಕ್ತಿ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಸಮೃದ್ಧಗೊಳಿಸಿದೆ. ಯಕ್ಷಗಾನ ಅರ್ಥಗಾರಿಕೆ, ಗಮಕ ವಾಚನ, ನಾಟಕ ನಿರ್ದೇಶನ ಹಾಗೂ ಸಾಹಿತ್ಯ ರಚನೆ ಅವರ ಹವ್ಯಾಸಗಳಾಗಿವೆ. ಅವರ ಬರಹಗಳು ಹೃದಯಸ್ಪರ್ಶಿ, ಪ್ರೇರಣಾದಾಯಕ ಹಾಗೂ ಜೀವನಮೌಲ್ಯಗಳಿಂದ ಕೂಡಿವೆ.

ಲೇಖನ ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Comments are closed.