ರಾಜ್ಯದಲ್ಲಿ RSS ಚಟುವಟಿಕೆಗೆ ನಿರ್ಬಂಧ ಹೇರಲು ಸರಕಾರ ಚಿಂತನೆ..?

Share the Article

RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಗೆ 100 ವರ್ಷ ತುಂಬಿದ ಬೆನ್ನಲ್ಲೇ ಶಾಕ್‌ ನೀಡಲು ಸರಕಾರ ಮುಂದಾಗಿದೆ. ಸರಕಾರ ರಾಜ್ಯದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲಿದೆ.

ಈ ಕುರಿತು ಸರಕಾರ ಗಂಭೀರ ಚಿಂತನೆ ಮಾಡಿದೆ. ಸಾರ್ವಜನಿಕ, ಸರಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರ್‌.ಎಸ್‌.ಎಸ್‌ ಚಟುವಟಿಕೆಗೆ ಬ್ರೇಕ್‌ ಹಾಕಲಾಗುವುದು. ಅದೇ ರೀತಿ ರಾಜ್ಯದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಕಡಿವಣ ಹಾಕಲು ಸಿಎಂ ಗೆ ಕೆಲವು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಶಾಲಾ-ಕಾಲೇಜುಗಳ ಆವರಣ, ಉದ್ಯಾನವನ, ಸರಕಾರಿ ಮೈದಾನ, ಹಾಸ್ಟೆಲ್‌ ಕ್ಯಾಂಪಸ್‌ಗಳಲ್ಲಿ ಆರ್‌.ಎಸ್‌.ಎಸ್‌ ಚಟುವಟಿಕೆ ನಿರ್ಬಂಧಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದನ್ನೂ ಓದಿ:Education: ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ; ಸಚಿವ ಮಧು ಬಂಗಾರಪ್ಪ

ಆರ್‌.ಎಸ್‌.ಎಸ್‌. ಚಟುವಟಿಕೆಗೆ ನಿರ್ಬಂಧ ಹೇರುವ ಕೆಲಸಕ್ಕೆ ಸರಕಾರ ಚಿಂತನೆ ಮಾಡಿದೆ. ಕಾನೂನಾತ್ಮಕವಾಗಿ ನಿಷೇಧಿಸಲು ಸಾಧ್ಯವಿಲ್ಲವೆಂದು ಅರಿತಿದೆ. ಹೀಗಾಗಿ ಸರಕಾರ ಈ ರೀತಿಯಲ್ಲಿ ಚಿಂತನೆ ನಡೆಸಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಗಿದೆ. ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಈ ಕುರಿತು ಸೂಚನೆ ನೀಡಿರುವ ಕುರಿತು ವರದಿಯಾಗಿದೆ.

Comments are closed.