Bigg Boss Kannada: ಬರೋಬ್ಬರಿ 6 ಗಂಟೆ ಸ್ನಾನ ಮಾಡಿದ ಸತೀಶ್ !! ರೊಚ್ಚಿಗೆದ್ದ ಬಿಗ್ ಬಾಸ್ ಮನೆ ಮಂದಿ

Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಗೊಂಡಿದ್ದು ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲಿಯೇ ಟಾಪ್ ಟಿ ಆರ್ ಪಿ ಯನ್ನು ಕೂಡ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಮನೆಗೆ ಚಿತ್ರ ವಿಚಿತ್ರವಾದ ಅಂತಹ ಅಭ್ಯರ್ಥಿಗಳು ಕಾಲಿಟ್ಟಿದ್ದಾರೆ. ಅದರಲ್ಲೂ ಸತೀಶ್ ಅವರ ನಡವಳಿಕೆಗಳು ಬಿಗ್ ಬಾಸ್ ಮನೆಯಲ್ಲಿ ಹಲವರಿಗೆ ಹಿಡಿಸದೆ ಹೋಗಿದೆ. ಇದೀಗ ಈ ಪುಣ್ಯಾತ್ಮ ಬರೋಬ್ಬರಿ ಆರು ಗಂಟೆಗಳ ಕಾಲ ಸ್ನಾನ ಮಾಡಿ ಮನೆಯವರೆಲ್ಲರನ್ನು ರೊಟ್ಟಿಗೆ ಬೀಸಿದ್ದಾನೆ.

ಹೌದು, ಸತೀಶ್ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಗಂಟೆ ಸ್ನಾನ ಮಾಡಿದ್ದಾರೆ! ಇದನ್ನು ನೋಡಿ ಮನೆ ಮಂದಿ ಶಾಕ್ಗೆ ಒಳಗಾಗಿದ್ದಾರೆ. ಅನೇಕರ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ. ಸತೀಶ್ ಅವರು ಬಿಗ್ ಬಾಸ್ ಮನೆಯಲ್ಲಿ 4-6 ತಾಸುಗಳಷ್ಟು ಸ್ನಾನ ಮಾಡಿದ್ದಾರೆ. ಅವರ ಜೋಡಿ ಚಂದ್ರಪ್ರಭ ಅವರು ಬಾತ್ರೂಂನಲ್ಲಿ ಕುಳಿತು ಕುಳಿತು ಸುಸ್ತಾಗಿದ್ದಾರೆ. ಇದನ್ನು ಅವರಿಂದ ತಡೆದುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಈ ವಿಚಾರದಲ್ಲಿ ಅವರ ತಾಳ್ಮೆಯ ಕಟ್ಟೆ ಒಡೆದಿದೆ. ಬಾಯಾರಿಕೆ ಆದರೂ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡು ಗಾಜಿನ ಲೋಟವನ್ನು ಬೀಸಿ ನೆಲಕ್ಕೆ ಎಸೆದಿದ್ದಾರೆ. ಇದರಿಂದ ಗಾಜಿನ ಲೋಟ ಒಡೆದು ಚೂರಾಗಿದೆ.
ಇದನ್ನೂ ಓದಿ:ದೈವ ಹೇಳಿದ್ದಾ? ದೈವ ನರ್ತಕ ಹೇಳಿದ್ದಾ? ಪಿಲಿಚಂಡಿ ದೈವ ನುಡಿ ಬಗ್ಗೆಯೇ ಚರ್ಚೆ!
ಇನ್ನೂ ಸತೀಶ್ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ಮನೆಯ ಅನೇಕರು ಹೇಳಿದ್ದಾರೆ. ಆದರೆ, ಸತೀಶ್ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳಲೇ ಇಲ್ಲ. ‘ನಾನು ಇರೋದೇ ಹೀಗೆ. ನಾನು ಹೀಗೆಯೇ ನಡೆದುಕೊಳ್ಳೋದು’ ಎಂದು ಆವಾಜ್ ಹಾಕಿದ್ದಾರೆ.
Comments are closed.