Home News Kerala: ಅಪರೂಪಕ್ಕೆ ಟಿಕೆಟ್ ಖರೀದಿಸಿ 25 ಕೋಟಿ ಲಾಟರಿ ಗೆದ್ದ ವ್ಯಕ್ತಿ!!

Kerala: ಅಪರೂಪಕ್ಕೆ ಟಿಕೆಟ್ ಖರೀದಿಸಿ 25 ಕೋಟಿ ಲಾಟರಿ ಗೆದ್ದ ವ್ಯಕ್ತಿ!!

Hindu neighbor gifts plot of land

Hindu neighbour gifts land to Muslim journalist

Kerala : ಕೇರಳದಲ್ಲಿ ವ್ಯಕ್ತಿಯೊಬ್ಬ ಬಲು ಅಪರೂಪಕ್ಕೆ ಲಾಟರಿ ಟಿಕೆಟ್ ಅನ್ನು ಖರೀದಿಸಿ ಬರುವ ಬರಿ 25 ಕೋಟಿ ರೂಪಾಯಿ ಲಾಟರಿ ಹೊಡೆದ ಅಪರೂಪದ ಘಟನೆ ನಡೆದಿದೆ.

ಹೌದು, ಕೇರಳ ರಾಜ್ಯದ ‘ತಿರುವೋಣಂ ಬಂಪರ್’ ಲಾಟರಿಯಲ್ಲಿ ಆಲಪ್ಪುಳ ಜಿಲ್ಲೆಯ ಶರತ್ ನಾಯರ್ ಎಂಬವರು ₹25 ಕೋಟಿ ಬಹುಮಾನ ಗೆದ್ದಿದ್ದಾರೆ. ‘TH 577825’ ಎಂಬ ಅಂಕಿಯ ಟಿಕೆಟ್‌ಗೆ ಬಂಪರ್ ಅದೃಷ್ಟ ಒಲಿದು ಬಂದಿದೆ.

ಇದನ್ನೂ ಓದಿ;Caste Survey : ಜಾತಿ ಗಣತಿ ಅವಧಿ ವಿಸ್ತರಣೆ? ಗೃಹ ಸಚಿವ ಪರಮೇಶ್ವರ ಮಹತ್ವದ ಹೇಳಿಕೆ

ಈ ಕುರಿತಾಗಿ ಮಾತನಾಡಿದ ಶರತ್ ನಾಯರ್ ಅವರು ‘ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮನೆಗೆ ಹೋಗಿ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಬಂಪರ್ ಬಹುಮಾನ ಗೆದ್ದಿರುವ ಬಗ್ಗೆ ಖಚಿತವಾಯಿತು. ಬಹುಮಾನ ಮೊತ್ತದ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಏನನ್ನೂ ಯೋಜಿಸಿಲ್ಲ. ಸ್ವಲ್ಪ ಸಾಲಗಳನ್ನು ತೀರಿಸಬೇಕಿದೆ. ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ.