Rice: ಹೋಟೆಲ್ ಅನ್ನ ಸೀಕ್ರೆಟ್: ಸೋಡಾ ಬದಲು ಇದನ್ನ ಹಾಕ್ತಾರೆ!

Rice: ಅನ್ನ (rice) ಮಾಡೋದು ತುಂಬಾ ಕಷ್ಟದ ಕೆಲಸ ಏನು ಅಲ್ಲ ಅಕ್ಕಿ ತೊಳೆದು ಕುಕ್ಕರ್ ಗೆ ಅಕ್ಕಿ ಜೊತೆ ಬೇಕಾದಷ್ಟು ನೀರು ಹಾಕಿ, ಕುಕ್ಕರ್ ಕೂಗಿಸಿದ್ರೆ ಮುಗೀತು. ಅನ್ನ ರೆಡಿ. ಆದ್ರೆ ಈ ಅನ್ನ ಹೊಟೇಲ್ ನಂತೆ ಉದುರು ಉದುರಾಗೋದೇ ಇಲ್ಲ. ಒಮ್ಮೆ ಮುದ್ದೆಯಾಗುತ್ತೆ, ಇನ್ನೊಮ್ಮೆ ಗಟ್ಟಿಯಾಗುತ್ತೆ. ಆದ್ರೆ ಈ ಹೋಟೆಲ್ ಅನ್ನ ಉದುರು ಉದುರಾಗಿರುವ ಸೀಕ್ರೆಟ್ ಇಲ್ಲಿದೆ ನೋಡಿ.

ಹೊಟೇಲ್ (Hotel) ನಂತೆ ಅನ್ನ ಮಾಡೋದು ಹೇಗೆ?
ಅಕ್ಕಿಗೆ ಬರೀ ನೀರು ಹಾಕಿ ಹೊಟೇಲ್ ನಲ್ಲಿ ಅನ್ನ ಮಾಡೋದಿಲ್ಲ. ಅಂದ್ರೆ ಅನ್ನ ಮಾಡೋವಾಗ ನೀರಿನ ಜೊತೆ ತುಪ್ಪ ಅಥವಾ ಬೆಣ್ಣೆ ಇಲ್ಲ ಎಣ್ಣೆಯನ್ನು ಬಳಸ್ತಾರೆ. ಈ ಫ್ಯಾಟ್, ಅನ್ನ ಮುದ್ದೆಯಾಗೋದನ್ನು ತಪ್ಪಿಸುತ್ತೆ.
ಅನ್ನ ಮಾಡುವಾಗ, ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. ಅದನ್ನು ಸರಿಯಾಗಿ ಕ್ಲೀನ್ ಮಾಡಿದಾಗ ಅದ್ರಲ್ಲಿರುವ ಪಿಷ್ಠ ಹೋಗುತ್ತದೆ. ಒಂದು ಕುಕ್ಕರ್ ತೆಗೆದುಕೊಂಡು ಅದ್ರಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ. ಅದನ್ನು ಬಿಸಿ ಮಾಡಿ ಅದಕ್ಕೆ ತೊಳೆದಿಟ್ಟ ಅಕ್ಕಿಯನ್ನು ಹಾಕಿ ಸೌಮ್ಯ ಪರಿಮಳ ಹೊರಬರುವವರೆಗೆ ಹುರಿಯಿರಿ. ನಂತ್ರ ಅದಕ್ಕೆ ನೀರು ಮತ್ತು ಉಪ್ಪನ್ನು ಸೇರಿಸಿ. ನೀರು ಕುದಿಯಲು ಶುರುವಾದ ಮೇಲೆ ಮುಚ್ಚಳವನ್ನು ಮುಚ್ಚಿ. ಕಡಿಮೆ ಉರಿಯಲ್ಲಿ ನೀವು 15 – 18 ನಿಮಿಷಗಳ ಕಾಲ ಬೇಯಿಸಿ.
ಇದನ್ನೂ ಓದಿ:Toll: ನ.15 ರಿಂದ ಹೊಸ ‘ಟೋಲ್’ ನಿಯಮ: UPI ಪಾವತಿದಾರರಿಗೆ ಭಾರೀ ರಿಯಾಯಿತಿ
ನೀವು ಕುಕ್ಕರ್ ಸೀಟಿ ಹಾಕಿ ವಿಸಿಲ್ ಹೊಡೆಸಬೇಡಿ. ಹಾಗೆಯೇ ಅದನ್ನು ಬೇಯಿಸಿ. ನೀವು ಕುಕ್ಕರ್ ಬದಲು ನಾನ್ ಸ್ಟಿಕ್ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಅನ್ನ ಮಾಡಬಹುದು. 18 ನಿಮಿಷಗಳ ನಂತ್ರ ಗ್ಯಾಸ್ ಆಫ್ ಮಾಡಿ. 5 -10 ನಿಮಿಷ ಹಾಗೆ ಬಿಡಿ. ಇನ್ನು ಅನ್ನವನ್ನು ಮಾಡುವಾಗ ನೀವು ಸಮ ಪ್ರಮಾಣಕ್ಕೆ ಆದ್ಯತೆ ನೀಡಬೇಕು. ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರನ್ನು ಹಾಕಬೇಕು. ಅದಲ್ಲದೆ ಅಡುಗೆ ಮಾಡುವಾಗ ನೀವು ಆಗಾಗಾ ಮುಚ್ಚಳವನ್ನು ತೆರೆಯಬಾರದು. 15 ನಿಮಿಷಗಳ ಕಾಲ ಹಾಗೆಯೇ ಇಡಿ.
Comments are closed.