Caste Census: ಕೇಂದ್ರ ಸಚಿವ ವಿ ಸೋಮಣ್ಣ ಮನೆಗೆ ಬಂದ 9 ಮಂದಿ ಗಣತಿದಾರರು; ಸಚಿವರಿಂದ ಕ್ಲಾಸ್

Caste Census: ರಾಜ್ಯ ಸರಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಗಣತಿಗೆಂದು ಬಂದವರ ಮೇಲೆ ಕೇಂದ್ರ ಸಚಿವ ವಿ.ಸೋಮಣ್ನ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಗೆ ಒಂಭತ್ತು ಜನರು ಬಂದಿದ್ದು, ಇಷ್ಟು ಜನ ಯಾಕೆ ಎಂದು ಸೋಮಣ್ಣ ಪ್ರಶ್ನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವೇ ಜಾತಿಗಣತಿ ಮಾಡಿಸುತ್ತದೆ. ಹಾಗಾಗಿ ಈಗ ಇಷ್ಟು ಪ್ರಶ್ನೆಗಳು ಬೇಕಾ? ಸರಕಾರಿ ನೌಕರರು ಸರಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

ಇಂದು ನಮ್ಮ ನಿವಾಸಕ್ಕೆ ಆಗಮಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿದಾರರಿಗೆ ಅಗತ್ಯ ಮಾಹಿತಿ ಒದಗಿಸಲಾಯಿತು.
Took part in the socio-economic and educational survey by providing all required details to the officials who visited our residence today. pic.twitter.com/nGRpqCuabt
— V. Somanna (@VSOMANNA_BJP) October 5, 2025
ಬೆಂಗಳೂರಿನ ವಿಜಯನಗರದಲ್ಲಿ ಕೇಂದ್ರ ಸಚಿವ ಸೋಮಣ್ಣ ಮನೆಗೆ 9 ಜನ ಸಿಬ್ಬಂದಿ ತೆರಳಿದ್ದು ಆಗ ಈ ಘಟನೆ ನಡೆದಿದೆ.
ಇದನ್ನೂ ಓದಿ:Rice: ಹೋಟೆಲ್ ಅನ್ನ ಸೀಕ್ರೆಟ್: ಸೋಡಾ ಬದಲು ಇದನ್ನ ಹಾಕ್ತಾರೆ!
Comments are closed.