Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ನಿಶ್ಚಿತಾರ್ಥ, ಫೆಬ್ರವರಿಯಲ್ಲಿ ಮದುವೆ

Rashmika Mandanna Engagement: ನಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಎಂಗೇಜ್‌ಮೆಂಟ್ ನಡೆದಿದೆ. ಇದು ಕೇವಲ ಅವರಿಬ್ಬರ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ನಡೆದಿದ್ದು, ಈ ಜೋಡಿ ಎಲ್ಲಿಯೂ ತಮ್ಮ ಫೋಟೋ ರಿವೀಲ್ ಆಗದಂತೆ ನೋಡಿಕೊಂಡಿದ್ದಾರೆ.

ಮುಂದಿನ ಫೆಬ್ರವರಿ 2026 ರಲ್ಲಿ ಇವರಿಬ್ಬರು ಹಸಮಣೆ ಏರಲಿದ್ದಾರೆ ಎನ್ನಲಾಗಿದೆ. ಇದು ಡೆಸ್ಟಿನೇಷನ್ ವೆಡ್ಡಿಂಗ್ ಅಂದರೆ ಇವರಿಬ್ಬರು ಎಲ್ಲೋ ದೂರದಲ್ಲಿ ಅವರಿಗಿಷ್ಟವಾದ ಸ್ಥಳದಲ್ಲಿ ಮದುವೆಯಾಗಲಿದ್ದಾರೆ.
ಇದನ್ನೂ ಓದಿ:Kateel: ಕಟೀಲು ದೇಗುಲ: ಸೇವಾದರದಲ್ಲಿ ಸ್ವಲ್ಪ ಇಳಿಕೆ
ಸೀಕ್ರೇಟ್ ನಿಶ್ಚಿತಾರ್ಥವು ವಿಜಯ್ ದೇವರಕೊಂಡ ನಿವಾಸದಲ್ಲಿ ಆಗಿದೆ ಎನ್ನಲಾಗುತ್ತಿದೆ. ಗುಟ್ಟಾಗಿ ನಿಶ್ಚಿತಾರ್ಥ ಮಾಡಿದ್ದು, ಅವರಿಬ್ಬರ ಕೆರಿಯರ್ ದೃಷ್ಟಿಯಿಂದ ಎನ್ನಲಾಗುತ್ತಿದೆ. ಇವರಿಬ್ಬರು ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸಿನಿಮಾ ರಿಲೀಸ್‌ಗೆ ತೊಂದರೆಯಾಗಬಾರದು ಎಂದು ಎಂಗೇಜ್‌ಮೆಂಟ್ ಸುದ್ದಿಯನ್ನು ಇವರಿಬ್ಬರು ಬಹಿರಂಗ ಪಡಿಸುತ್ತಿಲ್ಲ ಎನ್ನಲಾಗಿದೆ.
Comments are closed.