Home News Multiplex ticket Price: ನಿಮ್ಮ ಸಿನಿಮಾ ಟಿಕೆಟ್‌ ಕಾಯ್ದಿಟ್ಟುಕೊಳ್ಳಿ: ಪ್ರೇಕ್ಷಕರಿಗೆ ಸರಕಾರ ಸೂಚನೆ

Multiplex ticket Price: ನಿಮ್ಮ ಸಿನಿಮಾ ಟಿಕೆಟ್‌ ಕಾಯ್ದಿಟ್ಟುಕೊಳ್ಳಿ: ಪ್ರೇಕ್ಷಕರಿಗೆ ಸರಕಾರ ಸೂಚನೆ

Multiplex Cinema Offer
Image Credit Source: OutLook India

Hindu neighbor gifts plot of land

Hindu neighbour gifts land to Muslim journalist

Karnataka HighCourt: ರಾಜ್ಯದ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಲನಚಿತ್ರ ಪ್ರದರ್ಶನದ ಟಿಕೆಟ್‌ ಮೇಲೆ ವಿಧಿಸಿದ್ದ ರೂ.200 ಮಿತಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಚಲನಚಿತ್ರ ವೀಕ್ಷಿಸುವವರು ತಮ್ಮ ಟಿಕೆಟ್‌ ಮತ್ತು ಹಣ ಪಾವತಿ ಮಾಡಿದ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಲು ವೀಕ್ಷಕರಿಗೆ ಸರಕಾರ ಸೂಚನೆ ನೀಡಿದೆ.

ಚಲನಚಿತ್ರ ವೀಕ್ಷಣೆ ಸಂಬಂಧ ಟಿಕೆಟ್‌ ದರ ನಿಗದಿ ಮಾಡುವುದನ್ನು ತಡೆಯಲು ರಾಜ್ಯ ಸರಕಾರ ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನ ಮಾಡುವ ಚಲನಚಿತ್ರಗಳ ವೀಕ್ಷಣೆಯ ಟಿಕೆಟ್‌ ದರವನ್ನು ಗರಿಷ್ಠ ರೂ.200 ಮಿತಿ ಮಾಡಿ ಆದೇಶಿಸಿದೆ. ಇದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಜೊತೆಗೆ ಮಲ್ಪಿಪ್ಲೆಕ್ಸ್‌ಗಳು ಮಾರಾಟದ ಪ್ರತಿ ಟಿಕೆಟ್‌ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆ ನಿರ್ವಹಿಸುವಂತೆ ನಿರ್ದೇಶಿಸಿದೆ.

ಟಿಕೆಟ್‌ ಮಾರಾಟದ ದಿನಾಂಕ, ಸಮಯ, ಆನ್‌ಲೈನ್‌ ಅಥವಾ ಬೌತಿಕ ಕೌಂಟರ್‌ಗಳ ಮೂಲಕ ಟಿಕೆಟ್‌ ಮಾರಾಟದ ವಿವರ, ಕ್ರಿಡಿಟ್‌/ಡಬಿಟ್‌ ಕಾರ್ಡ್‌, ಯುಪಿಐ ನೆಟ್‌ ಬ್ಯಾಂಕಿಂಗ್‌ ಅಥವಾ ನಗದು ಪಾವತಿ ವಿವರ, ಸಂಗ್ರಹ ಮಾಡಿದ ಮೊತ್ತ, ಜಿಎಸ್‌ಟಿ ಮೊತ್ತ ಸೇರಿ ಸಮಗ್ರ ದಾಖಲೆ ಸಂಗ್ರಹಿಸಿಡಬೇಕು. ನಗದು ವಹಿವಾಟಿಗೆ ರಸೀದಿ, ಪ್ರತಿದಿನ ನಗದು ರಿಜಿಸ್ಟರ್‌ಗಳನ್ನು ಮಲ್ಟಿಪ್ಲೆಕ್ಸ್‌ನ ವ್ಯವಸ್ಥಾಪಕರು ಸಹಿ ಮಾಡಬೇಕು.

ಇದನ್ನೂ ಓದಿ;Recession: ಪುರುಷರ ಒಳ ಉಡುಪು ಖರೀದಿ ಕುಸಿತ : ಆರ್ಥಿಕ ಹಿಂಜರಿತ ಪಕ್ಕಾ! ಒಳ ಉಡುಪಿಗೂ ಆರ್ಥಿಕತೆಗೂ ಏನು ಸಂಬಂಧ?

ಹೈಕೋರ್ಟ್‌ ಅಂತಿಮ ತೀರ್ಪು ಬಂದ ಮೇಲೆ ಮಲ್ಟಿಫ್ಲೆಕ್ಸ್‌ಗಳು ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ ಸಂಗ್ರಹ ಮಾಡಿದ ಎಲ್ಲಾ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್‌ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.