Home News Dasara: ದಸರಾ ಪೆರೇಡ್ ನಲ್ಲಿ ನಡೆಯಿತು ಸಚಿವರ ಮೊಮ್ಮಗನೊಬ್ಬನ ದರ್ಬಾರ್ – ಹೈಕಮಾಂಡ್ ತನಕ ಹೋಯಿತು...

Dasara: ದಸರಾ ಪೆರೇಡ್ ನಲ್ಲಿ ನಡೆಯಿತು ಸಚಿವರ ಮೊಮ್ಮಗನೊಬ್ಬನ ದರ್ಬಾರ್ – ಹೈಕಮಾಂಡ್ ತನಕ ಹೋಯಿತು ದೂರು

Hindu neighbor gifts plot of land

Hindu neighbour gifts land to Muslim journalist

Dasara: ಜಂಬೂ ಸವಾರಿ ಆರಂಭಕ್ಕೂ ಮುನ್ನ ವೈಭವದ ದಸರಾ ಮೆರವಣಿಗೆ ನಡೆದಿದೆ. ಆದರೆ ಇದು ಕೊಂಚ ವಿವಾದಕ್ಕೂ ಕಾರಣವಾಗಿದೆ. ಅದೇನೆಂದರೆ ದಸರಾ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಂಪುಟ ಸಚಿವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ನಿಂತಿದ್ದರು. ಆದರೆ ಈ ವೇಳೆ ಎಲ್ಲರ ಕಣ್ಣು ಗ್ಲಾಸ್‌ ಧರಿಸಿ ಅವರ ಹಿಂದೆ ನಿಂತಿದ್ದ ಪುಟ್ಟ ಬಾಲಕನ ಮೇಲೆ ಹೋಗಿದೆ.

ಹೌದು, ಗುರುವಾರ ಮೈಸೂರಿನಲ್ಲಿ ಸಿಎಂ ಹಾಗೂ ಡಿಸಿಎಂ ತೆರೆದ ಜೀಪ್‌ನಲ್ಲಿ ಪರೇಡ್‌ ಮಾಡಿದ್ದರು. ಇದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಈ ವೇಳೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಂಪುಟ ಸಚಿವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಕಾಣಿಸಿಕೊಂಡ ನಂತರ ವಿವಾದ ಭುಗಿಲೆದ್ದಿದೆ. ಸಾಂಪ್ರದಾಯಿಕವಾಗಿ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವ ಗಣ್ಯರಿಗೆ ಮೀಸಲಾಗಿರುವ ವಿಜಯದಶಮಿ ಮೆರವಣಿಗೆಯಲ್ಲಿ, ಕಪ್ಪು ಸನ್ ಗ್ಲಾಸ್ ಧರಿಸಿದ ಯುವಕ ತೆರೆದ ವಾಹನದಲ್ಲಿ ರಾಜ್ಯದ ಉನ್ನತ ನಾಯಕರ ಜೊತೆಗೆ ಪ್ರಮುಖವಾಗಿ ಸ್ಥಾನಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಹಾದೇವಪ್ಪ ಮೊಮ್ಮಗನ ಉಪಸ್ಥಿತಿ ರಾಜಕೀಯ ಬಿರುಗಾಳಿ ಹುಟ್ಟುಹಾಕಿದೆ.

ಇದನ್ನೂ ಓದಿ:Investment : ಹೂಡಿಕೆ ಮಾಡಲು ಚಿನ್ನ ಮತ್ತು ಬೆಳ್ಳಿಯಲ್ಲಿ ಯಾವುದು ಬೆಸ್ಟ್?

ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಮಾಹಿತಿ ಕೇಳಿದ್ದಾರೆ. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಿಎಂ, ಡಿಸಿಎಂಗೆ ಹಿಂದೆ ನಿಂತಿರುವ ಬಾಲಕನತ್ತ ಎಲ್ಲರ ಕಣ್ಣು ನೆಟ್ಟಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಡಿಸಿಎಂ, ಸರ್ಕಾರ ಸಚಿವರ ಪರೇಡ್ ಸಾಮಾನ್ಯ. ಇದರಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ? ಭಾಗಿಯಾಗಿದ್ದವ ಯಾರು? ಎಂದು ಹೈಕಮಾಂಡ್ ಮಾಹಿತಿ ಕೇಳಿದೆ ಎನ್ನಲಾಗಿದೆ.