Kateel: ಕಟೀಲು ದೇಗುಲ: ಸೇವಾದರದಲ್ಲಿ ಸ್ವಲ್ಪ ಇಳಿಕೆ

Share the Article

Kateel: ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಅಕ್ಟೋಬರ್‌ ಒಂದರಿಂದ ಹೊಸ ಸೇವಾದರ ಜಾರಿಗೆ ಬಂದಿದೆ. ಸೇವಾದರ ಏರಿಕೆ ಕುರಿತು ಪ್ರಕಟಣೆ ನೀಡಿದ ನಂತರ ಕೆಲವರು ದರ ಇಳಿಸುವಂತೆ ಜನಪ್ರತಿನಿಧಿಗಳು, ದೇಗುಲದ ಆಡಳಿತ ಮಂಡಳಿಗೆ ಮನವಿ ನೀಡಿದ್ದರು.

ಪರಿಣಾಮ ಹೂವಿನ ಪೂಜೆ ರೂ.200, ಕಾರ್ತಿಪೂಜೆ 20ರೂ, ತೀರ್ಥಬಾಟ್ಲಿ ರೂ.10 ಹೀಗೆ ಕೆಲವು ಸೇವೆಗಳ ಏರಿದ ದರದಲ್ಲಿ ಕೊಂಚ ಇಳಿಕೆಯಾಗಿದೆ.

ಇದನ್ನೂ ಓದಿ:Multiplex ticket Price: ನಿಮ್ಮ ಸಿನಿಮಾ ಟಿಕೆಟ್‌ ಕಾಯ್ದಿಟ್ಟುಕೊಳ್ಳಿ: ಪ್ರೇಕ್ಷಕರಿಗೆ ಸರಕಾರ ಸೂಚನೆ

ಮಹಾನವಮಿ ಹಾಗೂ ವಿಜಯದಶಮಿಯ ಎರಡೂ ದಿನಗಳಲ್ಲಿ 1500 ಕ್ಕೂ ಹೆಚ್ಚು ವಾಹನ ಪೂಜೆ, ನೂರರಷ್ಟು ಮಕ್ಕಳಿಗೆ ಅಕ್ಷರಾಭ್ಯಾಸ, 6100 ಹೂವಿನ ಪೂಜೆ, 4500 ಕುಂಕುಮಾರ್ಚನೆ ಸೇವೆಗಳಲ್ಲದೇ ಐನೂರಕ್ಕೂ ಹೆಚ್ಚು ಸೀರೆ ದೇವರಿಗೆ ಕಾಣಿಕೆಯಾಗಿ ಬಂದಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

Comments are closed.