Home News Cough Syrup Controversy: ಕೆಮ್ಮು ಔಷಧಿ ವಿವಾದದ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ: ‘ಸಾವಿಗೆ ಕಾರಣ...

Cough Syrup Controversy: ಕೆಮ್ಮು ಔಷಧಿ ವಿವಾದದ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ: ‘ಸಾವಿಗೆ ಕಾರಣ ನಿರ್ಲಕ್ಷ್ಯ, ಸಿರಪ್ ಅಲ್ಲ’

Cough syrup
Image source: masthmagaa

Hindu neighbor gifts plot of land

Hindu neighbour gifts land to Muslim journalist

Cough Syrup Controversy: ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವಿಗೀಡಾದ ಘಟನೆಗೆ ಸಂಬಂಧಪಟ್ಟಂತೆ, ರಾಜಸ್ಥಾನ ಆರೋಗ್ಯ ಇಲಾಖೆ ಕೊನೆಗೂ ಸ್ಪಷ್ಟನೆ ನೀಡಿದೆ. ಭರತ್‌ಪುರ ಮತ್ತು ಸಿಕಾರ್ ಜಿಲ್ಲೆಗಳಲ್ಲಿ ಇಬ್ಬರು ಮಕ್ಕಳ ಸಾವಿನ ನಂತರ ಕೆಮ್ಮಿನ ಸಿರಪ್ ಡೆಕ್ಸ್ಟ್ರೋಮೆಥೋರ್ಫಾನ್ ಬಗ್ಗೆ ಪ್ರಶ್ನೆಗಳು ಮೂಡಿದ್ದು, ಆದಾಗ್ಯೂ, ಎರಡೂ ಪ್ರಕರಣಗಳಲ್ಲಿನ ಸಾವುಗಳು ನೇರವಾಗಿ ಸಿರಪ್‌ನಿಂದ ಉಂಟಾಗಿಲ್ಲ ಎಂದು ಇಲಾಖೆ ಸಮರ್ಥನೆ ನೀಡಿದೆ.

ತನಿಖಾ ವರದಿಯ ಆಧಾರದ ಮೇಲೆ, ಮಕ್ಕಳಿಗೆ ವೈದ್ಯರು ಈ ಔಷಧಿಯನ್ನು ಶಿಫಾರಸು ಮಾಡಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದರ ಹೊರತಾಗಿಯೂ, ಸಿಕಾರ್ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದರಲ್ಲಿ, ಮಕ್ಕಳಿಗೆ ನಿಷೇಧಿತ ಕೆಮ್ಮು ಔಷಧಿಯನ್ನು ಶಿಫಾರಸು ಮಾಡಿದ್ದಕ್ಕಾಗಿ ವೈದ್ಯರು ಮತ್ತು ಔಷಧಿಕಾರರನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ:ಕಾಂತಾರ 1 ‘ಕನಕವತಿ’: ಸೇನೆಯಿಂದ ಸಿನಿಮಾಕ್ಕೆ- ಮ.ಅಶೋಕ ಚಕ್ರ ಪಡೆದವರ ಪುತ್ರಿ ರುಕ್ಮಿಣಿ ವಸಂತ್!

ಕೆಮ್ಮಿನ ಸಿರಪ್‌ ಕುಡಿದು, ಮಕ್ಕಳು ಸಾವಿಗೀಡಾಗಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದ ತಕ್ಷಣ, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ವ್ಸರ್ ಅವರು ತಕ್ಷಣದ ತನಿಖೆಗೆ ಆದೇಶ ನೀಡಿದ್ದರು. ಇದರ ನಂತರ, ಆರ್‌ಎಂಎಸ್‌ಸಿಎಲ್ (ರಾಜಸ್ಥಾನ ವೈದ್ಯಕೀಯ ಸೇವೆಗಳ ನಿಗಮ ಲಿಮಿಟೆಡ್) ಔಷಧದ ಪೂರೈಕೆ ಮತ್ತು ವಿತರಣೆಯನ್ನು ಸ್ಥಗಿತ ಮಾಡಿದೆ.