Cheque clearing: ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲಿಯರಿಂಗ್

Cheque clearing: ಚೆಕ್ ಕ್ಲಿಯರಿಂಗ್ ವ್ಯವಸ್ಥೆಯಲ್ಲಿ ಅಕ್ಟೋಬರ್ 4, 2025 ರಿಂದ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದೆ. ಹಳೆಯ ಬ್ಯಾಚ್ ಆಧಾರಿತ ವಿಧಾನ ಬದಲಾಗಿ, ನಿರಂತರ ಕ್ಲಿಯರಿಂಗ್ ಮತ್ತು ಸೆಟಲ್ಮೆಂಟ್ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇದರಿಂದ, ಬ್ಯಾಂಕ್‌ಗಳಲ್ಲಿ ಚೆಕ್‌ಗಳ ಹಣ ಈಗಿನ 1-2 ವ್ಯವಹಾರ ದಿನಗಳ ಬದಲು, ಕೆಲವೇ ಗಂಟೆಗಳಲ್ಲಿ ಖಾತೆಗಳಿಗೆ ಜಮಾ ಆಗಲಿದೆ.

ಇದನ್ನೂ ಓದಿ:Spam Call: ನಿಮ್ಮ ಫೋನ್ ಗೆ `ಸ್ಪ್ಯಾಮ್ ಕರೆಗಳು’ ಬಾರದಂತೆ ಮಾಡಲು ಜಸ್ಟ್ ಹೀಗೆ ಮಾಡಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ 3 ರಂದು ಹೊಸ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ.
ಹೊಸ ವ್ಯವಸ್ಥೆಯ ಪ್ರಯೋಜನಗಳು:
ಹಣವು ಕೆಲವೇ ಗಂಟೆಗಳಲ್ಲಿ ಖಾತೆಗಳಿಗೆ ಜಮಾ ಆಗುತ್ತದೆ.
ದೇಶಾದ್ಯಂತ ಕ್ಲಿಯರಿಂಗ್ (Cheque clearing) ವೇಗ ಏಕರೂಪವಾಗುತ್ತದೆ.
ಚೆಕ್‌ಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಸುಲಭವಾಗುತ್ತದೆ.
Comments are closed.