Bigg Boss: ಬಿಗ್ ಬಾಸ್ ಮನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ – ಸ್ವತಃ ಬಿಗ್ ಬಾಸೇ ಶಾಕ್

Bigg Boss : ‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಮಲ್ಲಮ್ಮ. ಇದೀಗ ಮಲ್ಲಮ್ಮ ಅವರ ಬಿಗ್ ಬಾಸ್ ಮನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು, ಬಿಗ್ ಬಾಸ್ ಶಾಕ್ ಆಗುವಂತೆ ಮಾಡಿದ್ದಾರೆ.

ಹೌದು, ಬಿಗ್ ಬಾಸ್ ಮಲ್ಲಮ್ಮ ಅವರನ್ನು ಕನ್ಫೆಷನ್ ರೂಂಗೆ ಕರೆದಿದ್ದರು. ಈ ವೇಳೆ ಬಿಗ್ ಬಾಸ್ ಮಾತನಾಡುವಾಗಲೇ ಅವರು ಮಲಗಿದಂತೆ ಕಂಡು ಬಂತು. ಅಂದಹಾಗೆ ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕನ್ಫೇಷನ್ ರೂಮ್‌ಗೆ ಬರುವಂತೆ ಮಲ್ಲಮ್ಮ ಅವರಿಗೆ ಸೂಚಿಸಲಾಯ್ತು. ಕನ್ಫೇಷನ್ ರೂಮ್‌ನೊಳಗೆ ಬರುತ್ತಿದ್ದಂತೆ ಬಿಗ್‌ಬಾಸ್, ಏನಾದರೂ ಮಾತನಾಡಿ ಎಂದು ಮಲ್ಲಮ್ಮ ಅವರಿಗೆ ಹೇಳುತ್ತಾರೆ. ಆಗ ಮಲ್ಲಮ್ಮ, ನಾನು ನಿಮಗೆ ಒಗಟು ಹೇಳುತ್ತೇನೆ. ನೀವು ಉತ್ತರ ಕೊಡಿ ಅಂತಾರೆ. ಬಿಳಿ ಹೊಲದಾಗ ಕರಿ ಬೀಜ ಬಿತ್ತವನು ಬಲು ಜಾಣ ಏನಿದು ಅಂತ ಕೇಳ್ತಾರೆ. ಸ್ಪಲ್ಪ ಯೋಚಿಸಿದ ಬಿಗ್‌ಬಾಸ್ “ಹತ್ತಿ” ಎಂದು ಸರಿಯಾದ ಉತ್ತರವನ್ನು ನೀಡುತ್ತಾರೆ.
ಇದನ್ನೂ ಓದಿ;Gold Price : ಆಯುಧ ಪೂಜೆಯ ದಿನ ಚಿನ್ನದ ದರದಲ್ಲಿ ಭರ್ಜರಿ ಏರಿಕೆ!!
ಆಗ ಬಿಗ್‌ಬಾಸ್ ಮನೆಯಲ್ಲಿ ಬಿಗ್‌ಬಾಸ್‌ಗೆ ಮಾತನಾಡೋದಕ್ಕೆ ಮತ್ತು ಉತ್ತರ ಕೊಡೋದಕ್ಕೆ ಯೋಚನೆ ಮಾಡುವ ಹಾಗೆ ಮಾಡಿದೀರಿ ಮಲ್ಲಮ್ಮ ಎಂದು ತಮಾಷೆ ಮಾಡುತ್ತಾರೆ. ಬಿಗ್‌ಬಾಸ್‌ಗೆ ಪ್ರಶ್ನೆ ಕೇಳುವ ಮೂಲಕ ಮಲ್ಲಮ್ಮ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
Comments are closed.