Home News Karuru Stampede: ಕರೂರ್ ಕಾಲ್ತುಳಿತಕ್ಕೆ ಕಾರಣ ಬರೆದಿಟ್ಟು ವಿಜಯ್ ಅಭಿಮಾನಿ, ಟಿವಿಕೆ ಕಾರ್ಯಕರ್ತ ಆತ್ಮಹತ್ಯೆ

Karuru Stampede: ಕರೂರ್ ಕಾಲ್ತುಳಿತಕ್ಕೆ ಕಾರಣ ಬರೆದಿಟ್ಟು ವಿಜಯ್ ಅಭಿಮಾನಿ, ಟಿವಿಕೆ ಕಾರ್ಯಕರ್ತ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

ಚೆನ್ನೈ: ನಟ ವಿಜಯ್ (Actor Vijay) ರ ರಾಜಕೀಯ ರ‍್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ (Karur Stampede) ದುರಂತ ಸಂಭವಿಸಿದ ಎರಡು ದಿನಗಳ ನಂತರ ಪಕ್ಷದ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಭಿಮಾನಕ್ಕೆ ಅಭಿಮಾನಿಯ ಮರಣ ಸಂಭವಿಸಿದೆ.

ನಟ ವಿಜಯ್’ಯ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ ಅಯ್ಯಪ್ಪನ್ (52) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲ್ತುಳಿತದಲ್ಲಿ ಸಾವು ಕಂಡ 41 ಅಭಿಮಾನಿಗಳ ಸಾವಿಗೆ ಇನ್ನೊಬ್ಬನ ಸಾವು ಸೇರಿಕೊಂಡಿದೆ.

ಈ ಭೀಕರ ಕಾಲ್ತುಳಿತ ಘಟನೆಯಿಂದ ತನಗೆ ನೋವಾಗಿದೆ ಎಂದು ಭಾವನಾತ್ಮಕವಾಗಿ ಪತ್ರ ಬರೆದಿರುವ ಅಯ್ಯಪ್ಪನ್, ಈ, ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಪೊಲೀಸರು ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಅವರು ಆರೋಪಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಗೆ ದೊರೆತ ಮಾಹಿತಿಯ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಲ್ಲುಪುರಂನ ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.