Home News Kantara-1: ‘ಕಾಂತರಾ- 1’ ಟಿಕೆಟ್ ದರ ಭರ್ಜರಿ ಏರಿಕೆ!!

Kantara-1: ‘ಕಾಂತರಾ- 1’ ಟಿಕೆಟ್ ದರ ಭರ್ಜರಿ ಏರಿಕೆ!!

Hindu neighbor gifts plot of land

Hindu neighbour gifts land to Muslim journalist

Kantara-1: ‘ಕಾಂತಾರ ಚಾಪ್ಟರ್‌ 1’ ಟಿಕೆಟ್‌ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಕೇವಲ 34 ನಿಮಿಷಗಳಲ್ಲಿ 10,000 ಟಿಕೆಟ್‌ ಸೇಲ್‌ ಆಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೇ ಕಾಂತರಾ-1 ಟಿಕೆಟ್ ದರ ಕೂಡ ಏರಿಕೆಯಾಗಿದೆ.

ಹೌದು, ಈ ಮೊದಲು ರಾಜ್ಯ ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತಂದಿತ್ತು. ಇದರ ಅನ್ವಯ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರ 200 ರೂಪಾಯಿ ಮೀರುವಂತಿರಲಿಲ್ಲ. ಶೇ.18 ಟ್ಯಾಕ್ಸ್ ಮೊತ್ತ ಸೇರಿದರೆ ಟಿಕೆಟ್ ದರ 236 ರೂಪಾಯಿ ಆಗುತ್ತಿತ್ತು. ಆದರೆ, ಇದನ್ನು ಪಿವಿಆರ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕೋರ್ಟ್​ನಲ್ಲಿ ಪ್ರಶ್ನೆ ಮಾಡಿತ್ತು. ಸದ್ಯ ಕೋರ್ಟ್ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಪರಿಣಾಮ ‘ಕಾಂತಾರ: ಚಾಪ್ಟರ್ 1’ ಟಿಕೆಟ್ ದರದಲ್ಲಿ ಏರಿಕೆ ಆಗಿದೆ.

ಮಲ್ಟಿಪ್ಲೆಕ್ಸ್​ಗಳಲ್ಲಿ ಕ್ಲಾಸಿಕ್ ಅಂದರೆ ಕೆಳ ಹಂತದ ಆಸನಗಳಿಗೆ 340-400 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪ್ರೈಮ್​ ಆಸನಗಳಿಗೆ 450-500 ರೂಪಾಯಿ ಟಿಕೆಟ್ ದರ ನಿಗದಿ ಆಗಿದೆ. ರಿಕ್ಲೈನರ್​ ಆಸನಗಳಿಗೆ 800 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ಇದೆ. ಥಿಯೇಟರ್​ನಲ್ಲಿ 200 ರೂಪಾಯಿಯಿಂದ 350 ರೂಪಾಯಿ ಆಸುಪಾಸಿನಲ್ಲಿ ದರ ನಿಗದಿ ಆಗಿದೆ.

ಇದನ್ನೂ ಓದಿ:Karnataka: ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ

ಇನ್ನು ಬೆಂಗಳೂರಿನಲ್ಲಿ ಕೆಲವು ಕಡೆ ಸಿನಿಮಾದ ಗರಿಷ್ಠ ಟಿಕೆಟ್‌ ದರ 1000 ರು.ಗಳಿಗೆ ಏರಿಕೆ ಆಗಿದೆ. ಮೈಸೂರು, ಮಂಗಳೂರು ಸೇರಿದಂತೆ ಜಿಲ್ಲಾಕೇಂದ್ರಗಳಲ್ಲಿ ರು.750 ಗರಿಷ್ಠ ಟಿಕೆಟ್‌ ದರವಿದೆ. ಉಳಿದಂತೆ ಹೆಚ್ಚಿನೆಡೆ 350 ರು.ನಿಂದ 550ರು.ವರೆಗೆ ಸಾಮಾನ್ಯ ದರವಿದೆ.