SL Bhairappa : ಎಸ್ ಎಲ್ ಭೈರಪ್ಪ ಕಾದಂಬರಿಗಳಿಗೆ ಹೆಚ್ಚಿದ ಬೇಡಿಕೆ – ಹಲವು ಮಳಿಗೆಗಳಲ್ಲಿ ಪುಸ್ತಕಗಳೆ ಖಾಲಿ

Share the Article

S L Bhairappa : ಕನ್ನಡದ ಹೆಸರಾಂತ ಸಾಹಿತಿ, ಕಾದಂಬರಿಕಾರ ಬೈರಪ್ಪನವರ ಪಂಚಭೂತಗಳಲ್ಲಿ ಲೀಲಾಗಿದ್ದಾರೆ. ಬೈರಪ್ಪ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರ ಉತ್ಕೃಷ್ಟ ಬರಹಗಳು ಎಂದೆಂದಿಗೂ ನಮ್ಮೊಡನೆ ಇರುತ್ತವೆ.

ಬೈರಪ್ಪನವರ ಕಾದಂಬರಿಗಳೆಂದರೆ ಜನತೆಗೆ ಎಲ್ಲಿಲ್ಲದ ಪ್ರೀತಿ, ಕುತೂಹಲ, ಅತೀವವಾದ ಆಸಕ್ತಿ. ಹೀಗಾಗಿ ಪುಸ್ತಕ ಪ್ರಕಟಣೆಗೆ ಮುಂಚೆಯೇ ಭೈರಪ್ಪನವರ ಕೃತಿಗಳು ಮರುಮುದ್ರಣ ಕಾಣುತ್ತಿದ್ದವು. ಭೈರಪ್ಪನವರ ಯಾವ ಕೃತಿಗಳು ಇದುವರೆಗೂ 10 ಕ್ಕಿಂತ ಕಡಿಮೆ ಮುದ್ರಣವನ್ನು ಕಂಡಿಲ್ಲ. ಆ ರೀತಿ ಓದುಗರನ್ನು ಹಿಡಿದಿಟ್ಟುವ ಶಕ್ತಿ ಭೈರಪ್ಪನವರ ಬರವಣಿಗೆಗೆ. ಇದೀಗ ಬೈರಪ್ಪನವರು ಸಾವನ್ನಪ್ಪಿದ ಬಳಿಕವೋ ಅವರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ಹಲವು ಮಳಿಗೆಗಳಲ್ಲಿ ಭೈರಪ್ಪನವರ ಪುಸ್ತಕಗಳು ಖಾಲಿಯಾಗಿವೆ.

ಹೌದು, ಎಸ್.ಎಲ್. ಭೈರಪ್ಪ ಅವರ ನಿಧನದ ನಂತರ ಬೆಂಗಳೂರು ನಗರದಾದ್ಯಂತ ಪುಸ್ತಕ ಮಳಿಗೆಗಳು ಅವರ ಪುಸ್ತಕಗಳ ಭರ್ಜರಿ ಮಾರಾಟವನ್ನು ನಡೆಸುತ್ತಿವೆ. ಕೆಲವು ಅಂಗಡಿಗಳಲ್ಲಿ ಅವರ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ಲೇಖಕರ ಪ್ರಕಾಶಕರಾದ ಸಾಹಿತ್ಯ ಭಂಡಾರ ಶುಕ್ರವಾರದವರೆಗೆ ಮುಚ್ಚಿರುವುದರಿಂದ, ಅಂಗಡಿಗಳು ಅವರ ಕೃತಿಗಳನ್ನು ತಕ್ಷಣ ಮರುಮುದ್ರಣ ಮಾಡಲು ಸಾಧ್ಯವಿಲ್ಲ ಅಂತ ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ:Sanjana Galrani: ಮಾದಕ ವಸ್ತು ಖರೀದಿ ಆರೋಪ: ನಟಿ ಸಂಜನಾ ಗರ್ಲಾನಿಗೆ ಸುಪ್ರೀಂ ಕೋರ್ಟ್‌ ನೋಟಿಸ್

ಅತೀ ದೊಡ್ಡ ಪುಸ್ತಕ ಮಾಲ್ ಎಂಬ ಹೆಗ್ಗಳಿಕೆ ಪಡೆದ ಸಪ್ನಾ ಬುಕ್ ಹೌಸ್ ಗುರುವಾರ ಬೆಳಿಗ್ಗೆ ವೇಳೆಗೆ ಭೈರಪ್ಪ ಅವರ ಕೃತಿಗಳ 500 ಕ್ಕೂ ಹೆಚ್ಚು ಪ್ರತಿಗಳನ್ನು ಮಾರಾಟ ಮಾಡಿದೆ. ಅದರ ಕನ್ನಡ ಪುಸ್ತಕಗಳು ಮತ್ತು ಪ್ರಕಟಣಾ ವಿಭಾಗದ ಜನರಲ್ ಮ್ಯಾನೇಜರ್ ಆರ್ ದೊಡ್ಡೇಗೌಡ, “ನಮ್ಮಲ್ಲಿ ಎಲ್ಲಾ ಶೀರ್ಷಿಕೆಗಳು ಸ್ಟಾಕ್‌ನಲ್ಲಿವೆ, ಆದರೆ ಸೀಮಿತ ಸಂಖ್ಯೆಯಲ್ಲಿ ಮಾತ್ರ. ಬೇಡಿಕೆ ಮುಂದುವರಿಯುವ ಸಾಧ್ಯತೆಯಿದೆ. ಹೆಚ್ಚಿನ ಓದುಗರು 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.

Comments are closed.