Delhi: ದೆಹಲಿ ಪ್ರಬಲ ಸ್ವಾಮೀಜಿಯ ಕಾಮಪುರಾಣ ಬಹಿರಂಗ – ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ತೀಟೆ ತೀರಿಸಿಕೊಳ್ಳಲು ಫಾರಿನ್ ಟ್ರಿಪ್ ಆಫರ್

Share the Article

Delhi: ಕಾವಿ ಧರಿಸಿದ ಸ್ವಾಮೀಜಿಗಳ ಪೈಕಿ ಕೆಲವರು ತಮ್ಮ ಪೀಠಕ್ಕೆ ಗೌರವ ತರುವ ರೀತಿ ನಡೆದುಕೊಳ್ಳುವುದನ್ನು ಬಿಟ್ಟು, ಕಾಮದ ತೀಟೆಯನ್ನು ತೀರಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದು ನಮ್ಮ ಇಡೀ ಭಾರತೀಯ ಸಂಸ್ಕೃತಿ ತಲೆತಗ್ಗಿಸುವಂತಹ ಕೃತ್ಯ. ಇದೀಗ ಮತ್ತೆ ಅಂತದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು ದೆಹಲಿಯ ಸ್ವಾಮೀಜಿ ಒಬ್ಬ ಕಾಲೇಜು ವಿದ್ಯಾರ್ಥಿನಿಯರಿಗೆ “ನೀನು ಹೈಕ್ಲಾಸ್‌ ಆಗಿದ್ಯಾ.. ನೋಡೋಕೆ ಸಖತ್ತಾಗಿದ್ಯಾ.. ನಿನಗೆ ಸ್ಕಾಲರ್‌ಶಿಪ್‌ ಕೊಡಿಸ್ತೀನಿ.. ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗ್ತೀನಿ. ಹೇ.. ಬೇಬಿ ಐ ಲವ್‌ ಯು..” ಇಂದಲ್ಲ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿದ್ದ ವಿಚಾರ ಈಗ ಬಟಾ ಬಯಲಾಗಿದೆ.

ಹೌದು, ದೆಹಲಿಯ (Delhi) ಚೈತನ್ಯಾನಂದ ಸರಸ್ವತಿ ಸ್ವಾಮೀಜಿ (Chaithyananda swami) ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು, ಈ ಸುದ್ದಿ ಸದ್ದು ಮಾಡ್ತಿದ್ದಂತೆ ದೆಹಲಿಯ ವಸಂತ್‌ ಕುಂಜ್‌ನ ಪ್ರತಿಷ್ಠಿತ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್ಮೆಂಟ್ ಸ್ವಾಮೀಜಿಗೆ ಗೇಟ್‌ ಪಾಸ್‌ ನೀಡಿದೆ. ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೇಸ್‌ ದಾಖಲಾಗಿದೆ.

ಶಾರದಾ ಇನ್‌ಸ್ಟಿಟ್ಯೂಟ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 32 ವಿದ್ಯಾರ್ಥಿನಿಯರ ಪೈಕಿ ಸುಮಾರು 16 ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಸ್ವಾಮೀಜಿ ಮೇಲಿದೆ. ವಿದ್ಯಾರ್ಥಿನಿಯರನ್ನು ವ್ಯವಸ್ಥಿತವಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ತಮ್ಮ ಕೋಣೆಗೆ ಕರೆಸಿಕೊಳ್ಳುತ್ತಿದ್ದ ಸ್ವಾಮೀಜಿ, ನಾನು ಹೇಳಿದಂತೆ ಕೇಳಿಲ್ಲ ಅಂದರೆ ಕಡಿಮೆ ಅಂಕ ಕೊಡಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಸ್ವಾಮೀಜಿ ಕಳ್ಳಾಟ ಬಯಲು ಆಗ್ತಿದ್ದಂತೆ ಶೃಂಗೇರಿ ಮಠದ ಆಡಳಿತ ಮಂಡಳಿ ಸ್ವಾಮೀಜಿಯನ್ನು ವಜಾಗೊಳಿಸಿದೆ. ಅತ್ತ ಕೇಸ್‌ ಬೀಳುತ್ತಿದ್ದಂತೆ ಇತ್ತ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಎಸ್ಕೇಪ್ ಆಗಿದ್ದಾರೆ. ತಲೆ ತಪ್ಪಿಸಿಕೊಂಡ ಸ್ವಾಮೀಜಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ. ಶಾರದಾ ಇನ್‌ಸ್ಟಿಟ್ಯೂಟ್‌ನ ನೆಲಮಾಳಿಗೆಯಲ್ಲಿ ವೋಲ್ವೋ ಕಾರು ಪತ್ತೆಯಾಗಿದ್ದು, ನಂಬರ್‌ ಪ್ಲೇಟ್ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ. ಇನ್ನು, ಆರೋಪಿ ವಿದೇಶಕ್ಕೆ ಎಸ್ಕೇಪ್‌ ಆಗಿರೋ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ಬ್ರೇಕ್ ಹಾಕಲು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

ಇದನ್ನೂ ಓದಿ:R B Timmapura: ಮದ್ಯದ ಅಂಗಡಿ ಹರಾಜು ಪ್ರಕ್ರಿಯೆಯಲ್ಲೂ ಮೀಸಲಾತಿ- ಅಬಕಾರಿ ಸಚಿವರಿಂದ ಬಿಗ್ ಅಪ್ಡೇಟ್

ವಿಚಾರಣೆಯ ಸಮಯದಲ್ಲಿ, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅದರಲ್ಲಿ 17 ಮಂದಿ ಮೇಲೆ ಸ್ವಾಮೀಜಿ ನಿಂದನೀಯ ಭಾಷೆ, ಅಶ್ಲೀಲ ವಾಟ್ಸಾಪ್ ಮತ್ತು ಪಠ್ಯ ಸಂದೇಶಗಳು ಹಾಗೂ ಅನಗತ್ಯ ದೈಹಿಕ ಸಂಪರ್ಕವನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಚೈತನ್ಯಾನಂದ ಕೂಡ ಬ್ಲಾಕ್‌ಮೇಲ್ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ಮೂವರು ಮಹಿಳಾ ಪ್ರಾಧ್ಯಾಪಕರು ಮತ್ತು ಆಡಳಿತಾಧಿಕಾರಿಗಳು ಆರೋಪಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.

Comments are closed.