Pradeep Eshwar: ರಸ್ತೆ ಗುಂಡಿಗಳಿಗೆ ಬಿಜೆಪಿಯೇ ಕಾರಣ: ಪ್ರದೀಪ್ ಈಶ್ವರ್

MLA Pradeep Eshwar: ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಗರ ಆರೋಪಕ್ಕೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಸರಕಾರದಲ್ಲಿ ಆದ ಅವೈಜ್ಞಾನಿಕ ರಸ್ತೆಗಳ ನಿರ್ಮಾಣವೇ ಕಾರಣ ಎಂದು ತಿರುಗೇಟು ನೀಡಿದ್ದಾರೆ.

ಇದರಿಂದಾಗಿ ರಸ್ತೆಗಳು ಗುಂಡಿ ಬಿದ್ದಿದೆ. ವಿಜಯೇಂದ್ರಣ್ಣ ನಿಮ್ಮ ತಂದೆ ಸಿಎಂ ಆಗಿದ್ದರು ಅಲ್ವಾ? ಆಗ ಗುಂಡಿಗಳ ಮೇಲೆ ನಿಮಗೆ ಪ್ರೀತಿ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ನೀವು ಎಲ್ಲಾ ಖಾತೆಗಳನ್ನು ನಿರ್ವಹಿಸಿದ್ದೀರಿ ಅಶೋಕ್ ಅಣ್ಣ, ದೆಹಲಿಯ ಹಲವೆಡೆ ಸಾಕಷ್ಟು ರಸ್ತೆಗುಂಡಿಗಳು ಬಿದ್ದಿದೆ. ದೆಹಲಿಯ ಸಿಎಂ ಮನೆಯ ಅಕ್ಕಪಕ್ಕದ ರಸ್ತೆಗಳಲ್ಲಿಯೇ ಗುಂಡಿಗಳಿದೆ. ಅಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಎರೂ ನಿಮ್ಮದೇ. ಇದಕ್ಕೆ ಏನು ಹೇಳುತ್ತೀರಿ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.
Comments are closed.