Udupi: ಉಡುಪಿ: ಉಕ್ಕಿನ ರೈಲ್ವೆ ಬ್ರಿಡ್ಜ್‌ ಉದ್ಘಾಟನೆಗೆ ಸಿದ್ಧ

Share the Article

Indrali Railway Overbridge: ಇಂದ್ರಾಳಿ ರೈಲ್ವೆ ಬ್ರಿಡ್ಜ್‌ ಉದ್ಘಾಟನೆಗೆ ಸಿದ್ಧಗೊಂಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

ಮಲ್ಪೆಯಿಂದ ಚಿತ್ರದುರ್ಗದ ಮೊಳಕಾಲ್ಮೂರು ನಡುವೆ ರಾಷ್ಟ್ರೀಯ ಹೆದ್ದಾರಿ 169 ಎ ನಿರ್ಮಾಣ ಆಗುತ್ತಿದೆ. ಉಡುಪಿಯ ಇಂದ್ರಾಳಿ ಬಳಿ ರೈಲ್ವೆ ಟ್ರ್ಯಾಕ್‌ ಹಾದು ಹೋಗುತ್ತದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಿಡ್ಜ್‌, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೊಸ ಉಕ್ಕಿನ ಬ್ರಿಡ್ಜ್‌ ಅನ್ನು ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ:H-1B Visa: ಭಾನುವಾರದ ಮೊದಲು ಹಿಂತಿರುಗಿ, ಟ್ರಂಪ್ H-1B ವೀಸಾ ಆದೇಶದ ಬೆನ್ನಲ್ಲೇ ಉದ್ಯೋಗಿಗಳಿಗೆ ಮೈಕ್ರೋಸಾಫ್ಟ್‌, ಜೆಪಿ ಮಾರ್ಗನ್‌, ಅಮೆಜಾನ್‌ ಅಲರ್ಟ್‌

ಹೊಸ ಬ್ರಿಡ್ಜ್‌ ನಿರ್ಮಾಣದೊಂದಿಗೆ ಅಪಘಾತ, ಒನ್‌ ವೇ, ಟ್ರಾಫಿಕ್‌ ಜಾಮ್‌, ಪಾದಚಾರಿಗಳ-ವಾಹನ ಸವಾರರ ಪರದಾಟಕ್ಕೆ ಪರಿಹಾರ ದೊರಕಿದಂತಾಗಿದೆ. ಉದ್ಘಾಟನೆ ಕುರಿತು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ.

Photo Credit: Public TV

Comments are closed.