Kambala: ಕಂಬಳ: ಕರಾವಳಿ ಜಾನಪದ ಕ್ರೀಡೆ ʼಕಂಬಳʼಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ; ಸರಕಾರ ನಿರ್ಧಾರ

Share the Article

Kambala: ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಸರಕಾರ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಈ ಕುರಿತು ಅಧಿಕೃತ ಆದೇಶ ಶೀಘ್ರವೇ ಹೊರಬೀಳಲಿದೆ.

ರಾಜ್ಯ ಸರಕಾರದಿಂದ ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕೂಡಾ ಕಂಬಳ ಕ್ರೀಡೆಗಳಿಗೂ ಸಿಗಲಿದೆ. ಕಂಬಳಕ್ಕೆ ರಾಜ್ಯ ಕ್ರೀಡೆಯ ಮಾನ್ಯತೆ ಅಂತಿಮ ಹಂತದಲ್ಲಿದ್ದು, ಕಂಬಳ ಅಸೋಸಿಯೇಷನ್‌ ನೇಮಕ ಪಟ್ಟಿಯನ್ನು ರಾಜ್ಯ ಸರಕಾರ ಅಂತಿಮಗೊಳಿಸಿದೆ.

ಸಮಿತಿಯ ಅಧ್ಯಕ್ಷರೇ ಕಂಬಳ ಅಸೋಸಿಯೇಷನ್‌ಗೆ ಅಧ್ಯಕ್ಷರಾಗಿದ್ದಾರೆ. ಕಂಬಳ ಕೋಣದ ಮಾಲೀಕರು, ಓಟಗಾರರು ಇತರರಿಗೆ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ ಸೌಲಭ್ಯ ಸಿಗಲಿದೆ. ಈ ಕುರಿತು ಬೈಲಾ ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.

 

Comments are closed.