Life Style: ಮದುವೆಯಾದ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಮೊದಲು ಸರ್ಚ್ ಮಾಡೋದೇ ಈ ವಿಷಯದ ಬಗ್ಗೆ !

Life Style: ಯಾವ ಸಮಸ್ಯೆ ಆಗಲಿ, ಪ್ರಶ್ನೆ ಆಗಲಿ ಜಸ್ಟ್ ಗೂಗಲ್ ಜೊತೆ ಕೇಳಿದ್ರೆ (Google search) ಉತ್ತರ ಸಿಕ್ಕಿ ಬಿಡುತ್ತೆ. ಯಾಕೆಂದರೆ ಗೂಗಲ್ ಅನ್ನೋದು ಇತ್ತೀಚಿಗೆ ಆಧುನಿಕ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತೆ. ಅದರಲ್ಲೂ ಇತ್ತೀಚಿನ ಗೂಗಲ್ ಅಧ್ಯಯನವು ವಿವಾಹಿತ ಮಹಿಳೆಯರು Google ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ವಿಷಯವನ್ನು ಬಹಿರಂಗ ಮಾಡಿದೆ.

ಹೌದು, ಮದುವೆಯಾದ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಮೊದಲು ಸರ್ಚ್ ಮಾಡುವುದೇ ಈ ವಿಷಯದ ಬಗ್ಗೆ ಅಂತೆ.
ಗಂಡನ ಬಗ್ಗೆ Google ನಲ್ಲಿ ಸರ್ಚ್ :
ಗೂಗಲ್‌ನ ಮಾಹಿತಿಯ ಪ್ರಕಾರ, ವಿವಾಹಿತ ಮಹಿಳೆಯರು ತಮ್ಮ ಗಂಡನ ಹೃದಯ ಗೆಲ್ಲಲು ತಮ್ಮ ಪತಿ ಏನು ಇಷ್ಟಪಡುತ್ತಾರೆ? ಏನು ಇಷ್ಟಪಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಹುಡುಕಾಟ ನಡೆಸುತ್ತಾರೆ.
ಇನ್ನು ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಹೇಗೆ? ಎನ್ನುವ ಪ್ರಶ್ನೆಗಳನ್ನು ಕೂಡಾ ಕೇಳುತ್ತಾರೆ.
ಇನ್ನು ಮಗುವನ್ನು ಹೊಂದಲು ಸರಿಯಾದ ಸಮಯ ಯಾವುದು ಎನ್ನುವ ಪ್ರಶ್ನೆಗಳನ್ನು ಗೂಗಲ್ ನಲ್ಲಿ ಕೇಳುತ್ತಾರೆ.
ಅದಲ್ಲದೆ ಮದುವೆಯ ನಂತರ ತಮ್ಮ ಹೊಸ ಕುಟುಂಬದ ಜೊತೆ ತಮ್ಮ ವರ್ತನೆ ಹೇಗೆ ಇರಬೇಕು? ಮದುವೆಯ ನಂತರ ತಮ್ಮ ಸ್ವಂತ ವ್ಯವಹಾರವನ್ನು ಹೇಗೆ ನಡೆಸೋದು? ಜೊತೆಗೆ ಅತ್ತೆ ಮಾವನನ್ನು ಶಾಂತಗೊಳಿಸೋದು? ಅಂತಾ ಹೀಗೆ ನಾನಾ ರೀತಿಯಲ್ಲಿ ಸಣ್ಣ ಸಣ್ಣ ವಿಚಾರಗಳನ್ನು ಗೂಗಲ್ (Google) ಬಳಿಯೇ ಕೇಳುತ್ತಾರೆ.
Comments are closed.